ಕಟ್ಟೆಚ್ಚರದಿಂದ ಶಾಲಾ-ಕಾಲೇಜು ಆರಂಭ

ಮೈಸೂರು:ಜ:01: ಕೋವಿಡ್ 19 ಕಾರಣದಿಂದ ಸ್ಥಗಿತಗೊಂಡಿದ್ದ ಎಸ್‍ಎಸ್‍ಎಲ್‍ಸಿ, ಪಿಯುಸಿ ತರಗತಿಗಳು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇಂದಿನಿಂದ ಮೈಸೂರಿನಲ್ಲಿ ಆರಂಭಗೊಂಡಿವೆ.
6 ರಿಂದ 9ನೇ ತರಗತಿಗಳು ಶಾಲಾ ಆವರಣದಲ್ಲಿಯೇ ವಿದ್ಯಾಗಮದ ಮೂಲಕ ನಡೆಯಲಿವೆ. ವಿದ್ಯಾರ್ಥಿಗಳ ಬರುವಿಕೆಗಾಗಿ ಶಾಲೆಗಳನ್ನು ಈಗಾಗಲೇ ಸ್ವಚ್ಛಗೊಳಿಸಿ ಸಿದ್ಧಮಾಡಲಾಗಿತ್ತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕುವೆಂಪುನಗರ ಪ್ರಾಂಶುಪಾಲರಾದ ಚಿದಾನಂದ ಸರ್ಕಾರದ ಸೂಚನೆಯಂತೆ 6-9ಕ್ಕೆ ವಿದ್ಯಾಗಮ ನಡೆಯುತ್ತಿದೆ. ಹತ್ತನೇ ತರಗತಿಯ ಕ್ಲಾಸ್ ಪ್ರಾರಂಭವಾಗಿದೆ. ಜೊತೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಈಗಾಗಲೇ ತಪಾಸಣೆ ಮಾಡಿ ತರಗತಿಗೆ ಸೇರಿಸಿದ್ದೇವೆ. 15ಮಂದಿಗೆ ಒಂದು ಕೊಠಡಿ ಮಾಡಿದ್ದೇವೆ. ದೊಡ್ಡ ಕೊಠಡಿ ಇದ್ದಾಗ ಒಂದು ಡೆಸ್ಕ್ ಗೆ ಒಬ್ಬರನ್ನೇ ಕೂರಿಸಿ ಸರ್ಕಾರ ಯಾವ ರೀತಿ ಸೂಚನೆ ನೀಡಿದೆ ಅದನ್ನು ಪಾಲಿಸಿ ಆರಂಭಿಸುತ್ತಿದ್ದೇವೆ. ಕೋವಿಡ್ ಬಗ್ಗೆ ಹೆಚ್ಚು ಮನವರಿಕೆ ಮಾಡುತ್ತಿದ್ದೇವೆ. ನಾಳೆಯಿಂದ ವಿದ್ಯಾರ್ಥಿಗಳಿಂದ ಪೆÇೀಷಕರ ಪತ್ರ ತೆಗೆದುಕೊಂಡು ಅವರ ಸುರಕ್ಷತೆಯ ಕ್ರಮ ತೆಗೆದುಕೊಂಡು ಆರಂಭಿಸುತ್ತಿದ್ದೇವೆ ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕ ವಿಶ್ವನಾಥ್ ಮಾತನಾಡಿ ನಮ್ಮಲ್ಲಿ 1/1/2021ರಿಂದ 6-7ತರಗತಿಗಳಿಗೆ ಎರಡನೇ ಹಂತದ ವಿದ್ಯಾಗಮ ಕಾರ್ಯಕ್ರಮ ಇವತ್ತಿನಿಂದ ಪ್ರಾರಂಭವಾಗುತ್ತಿದೆ. ಈಗಾಗಲೇ ನಮ್ಮಲ್ಲಿ ಸುಮಾರು 6ನೇ ತರಗತಿಯಲ್ಲಿ 36ವಿದ್ಯಾರ್ಥಿಗಳು, 7ನೇ ತರಗತಿಯಲ್ಲಿ 30ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಮೊದಲ ದಿನದ ಪ್ರತಿಕ್ರಿಯೆಯಲ್ಲಿ ಹತ್ತು ವಿದ್ಯಾರ್ಥಿಗಳು ಈಗಾಗಲೇ ಹಾಜರಾಗಿದ್ದಾರೆ. ಮತ್ತೆ ಐವತ್ತು ಭಾಗ ಪೆÇೀಷಕರು ಈಗಾಗಲೇ ಒಪ್ಪಿಗೆ ಪತ್ರವನ್ನು ನೀಡಿದ್ದಾರೆ. ಈಗ ನಾವು 6ನೇ ತರಗತಿಯಲ್ಲಿ ಎರಡು ತಂಡಗಳನ್ನು ಮಾಡಿಕೊಂಡು 15-15 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಮಾಡಿದ್ದೇವೆ. ಅದೇ ರೀತಿ 7ನೇ ತರಗತಿಯಲ್ಲೂ ಎರಡು ವಿಭಾಗಗಳನ್ನು ಮಾಡಿಕೊಂಡು ಕೊಠಡಿಯಲ್ಲಿ 15ವಿದ್ಯಾರ್ಥಿಗಳ ಗುಂಪು ರಚಿಸಿ ಮಾಡುತ್ತಿದ್ದೇವೆ. ವಿದ್ಯಾಗಮದ ಕಾನ್ಸೆಪ್ಟ್ ಏನೆಂದರೆ ಮೊದಲು ಆ ಮಕ್ಕಳು ಇರುವ ಮನೆಗಳಿಗೆ ಹೋಗಿ ವಿದ್ಯಾಭ್ಯಾಸದ ಚಟುವಟಿಕೆ ನೀಡುತ್ತಿದ್ದೆವು. ಸರ್ಕಾರದ ಇಲಾಖಾ ನಿರ್ದೇಶನದಂತೆ ಶಾಲಾ ಆವರಣದಲ್ಲಿ ಮತ್ತೆ ಶಾಲಾ ಕೊಠಡಿಯಲ್ಲೇ ಮಕ್ಕಳಿಗೆ ಕಲಿಕಾ ಪ್ರಕ್ರಿಯೆಯನ್ನು ನಡೆಸಬೇಕೆಂಬ ಉದ್ದೇಶದಿಂದ ಈ ವಿದ್ಯಾಗಮ ಕಾರ್ಯಕ್ರಮ-2ರಡಿಯಲ್ಲಿ ಈ ದಿನ ಮಕ್ಕಳಿಗೆ ಸುರಕ್ಷಾ ಕ್ರಮಗಳ ಬಗ್ಗೆ ಮತ್ತೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತಿದ್ದೇವೆ. ನಾಳೆಯಿಂದ ಇಲಾಖಾ ಸುತ್ತೋಲೆಯಂತೆ ಮಕ್ಕಳಿಗೆ ಕಲಿಕಾ ಚಟುವಟಿಕೆ ಏನಿದೆ ಕಲಿಕಾ ಪ್ರಕ್ರಿಯೆಗಳನ್ನು ನಾವು ಪ್ರಾರಂಭಿಸುತ್ತಿದ್ದೇವೆ. ನಮ್ಮ ಶಾಲೆಯಲ್ಲಿ ಪೆÇೀಷಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.
ಕುವೆಂಪುನಗರ ಜ್ಯೂನಿಯರ್ ಕಾಲೇಜ ಉಪಪ್ರಾಂಶುಪಾಲ ರವಿಕುಮಾರ್ ಮಾತನಾಡಿ 6ರಿಂದ 10ನೆ ತರಗತಿಯವರೆಗಿನ ಮಕ್ಕಳು ಬೆಳಗಿನ ಸೆಶನ್ ನಲ್ಲಿ ಬರುತ್ತಿದ್ದಾರೆ. ಪ್ರತಿ ಸೋಮವಾರದಿಂದ ಶನಿವಾರದವರೆಗೆ ಮಕ್ಕಳು ಬರುತ್ತಾರೆ. ಎಂಟು ಮತ್ತು ಒಂಭತ್ತನೇ ತರಗತಿಯ ಮಕ್ಕಳು ಮಧ್ಯಾಹ್ನದ ಸೆಷನ್ ನಲ್ಲಿ ಬರುತ್ತಾರೆ. 8ನೇ ತರಗತಿಯ ಮಕ್ಕಳು ಮಾರದಲ್ಲಿ ಎರಡು ದಿನ ಬರುತ್ತಾರೆ. 9ನೇ ತರಗತಿಯ ಮಕ್ಕಳು ವಾರದಲ್ಲಿ 3ದಿನ ಬರುತ್ತಾರೆ. ಇಲಾಖಾ ಗೈಡ್ ಲೈನ್ಸ್ ಏನಿದೆ ಮಧ್ಯಾಹ್ನದ ಅವಧಿಗೆ ಬರುವ 8ಮತ್ತು 9ನೇ ತರಗತಿಯ ಮಕ್ಕಳಿಗೆ ಮೂರು ಅವಧಿಯ ಪಾಠ ಇರುತ್ತದೆ. ಬೆಳಗಿನ ವೇಳೆ ಬರುವ ಮಕ್ಕಳಿಗೆ ಸೋಮವಾರದಿಂದ ಶನಿವಾರದವರೆಗೆ ನಾಲ್ಕು ತರಗತಿಗಳನ್ನು ಸಿದ್ಧಪಡಿಸಿದ್ದೇವೆ. ಇಲಾಖೆ ಹೇಳಿದ್ದು ಮೂರು ತರಗತಿ , ವ್ಯತ್ಯಾಸವಾದರೆ ಇರಲಿ ಅಂತ ಒಂದು ಹೆಚ್ಚು ಮಾಡಿಕೊಂಡಿದ್ದೇವೆ. ಇಂದು ಶಾಲೆ ಪ್ರಾರಂಭವಾಗಿದೆ. 10ನೇ ತರಗತಿ ಮಕ್ಕಳು ಬೆಳಗಿನ ಅವಧಿಯಲ್ಲಿ 80ಭಾಗ ಮಕ್ಕಳು ಬಂದಿದ್ದಾರೆ. ಇನ್ನು 20ಭಾಗ ಮಕ್ಕಳು ಬರುವವರಿದ್ದಾರೆ. ಅವರಿಗೆ ನಾವು ಕರೆ ಮಾಡಿ ಪೆÇೀಷಕರ ಮನವೊಲಿಸಿ ಬರುವ ವ್ಯವಸ್ಥೆಯನ್ನು ಮಾಡುತ್ತೇವೆ. ಬರತಕ್ಕ ಮಕ್ಕಳಿಗೆ ಸಾಮಾಜಿಕ ಅಂತರ ಕಾಪಾಡಿ ಅವರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ , ಟೆಂಪರೇಚರ್ ತಪಾಸಣೆ ಮಾಡಿ ಜೊತೆಗೆ ಸ್ಯಾನಿಟೈಸ್ ಮಾಡಿ ಅಂತರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ ಎಂದರು.
ಆಮೆಲೆ ತರಗತಿಯಲ್ಲೂ ಕೂಡ ಒಂದು ಬೆಂಚಿಗೆ ಇಬ್ಬರು ಮಕ್ಕಳು ಕುಳಿತುಕೊಳ್ಳುವಂತೆ ಮಾಡಿ 10ತರಗತಿಯಲ್ಲಿ ಮೂರು ತಂಡ ಮಾಡಿ, ಮೂರು ತಂಡದಲ್ಲಿ 18 -18 ಮಕ್ಕಳನ್ನು ಪಾಠ ಮಾಡಲು ವ್ಯವಸ್ಥೆ ಮಾಡಲಾಗಿದೆ. 1ರಿಂದ 12ರವರೆಗಿನ ಎಲ್ಲ ತರಗತಿಗಳು ನಡೆಯುತ್ತಿವೆ. ನಮ್ಮದು ಹೈಸ್ಕೂಲ್ ಸೆಕ್ಷನ್ ಆಗಿರುವುದರಿಂದ 8ರಿಂದ 10ಮೂರು ನಮ್ಮ ಜವಾಬ್ದಾರಿಯಲ್ಲಿ ನಡೆಯತ್ತೆ. ಇನ್ನು 6ರಿಂದ 7ಪ್ರೈಮರಿ ಸೆಕ್ಷನ್ ಮತ್ತೆ 11 ಮತ್ತು 12ರಂದು ಪ್ರಾಂಶುಪಾಲರ ಜವಾಬ್ದಾರಿಯಲ್ಲಿ ನಡೆಯಲಿದೆ. 10ನೇ ತರಗತಿ ರೆಗ್ಯೂಲರ್ ಕ್ಲಾಸ್ 8 ಮತ್ತು 9 ತರಗತಿ ಮಕ್ಕಳಿಗೆ ವಿದ್ಯಾಗಮ ನಡೆಯತ್ತೆ, 8ನೇತರಗತಿ ಮಕ್ಕಳು ಮಂಗಳವಾರ, ಗುರುವಾರ ಬರುತ್ತಾರೆ. 9ನೇ ತರಗತಿಯ ಮಕ್ಕಳು ಸೋಮವಾರ, ಬುಧವಾರ ಶುಕ್ರವಾರ ಬರುತ್ತಾರೆ. ಮಧ್ಯಾಹ್ನದ ಸೆಶನ್ ನಲ್ಲಿ 1.30ಕ್ಕೆ ಬಂದು 4.30ರವರೆಗಿರುತ್ತಾರೆ. 10ನೇತರಗತಿಯ ಮಕ್ಕಳು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.30ರಿಂದ 12.30ರವರೆಗೆ ಇಲಾಖಾ ನಿಯಮಾನುಸಾರ ಕ್ಲಾಸ್ ಮಾಡಲಾಗುತ್ತಿದೆ. ಕೆಲವರು ಕೋವಿಡ್ ತಪಾಸಣೆ ಮಾಡಿಸಿಕೊಂಡು ಬಂದಿದ್ದಾರೆ. ಜೆ.ಕೆ.ಮೈದಾನದಲ್ಲಿ ಇಲಾಖೆಯಿಂದಲೇ ವ್ಯವಸ್ಥೆ ಮಾಡಿದ್ದಾರೆ. ಯಾರು ಮಾಡಿಸಿಕೊಂಡು ಬಂದಿಲ್ಲ, ಅವರ ಪೆÇೀಷಕರನ್ನು ಕರೆಸಿ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಲಾಗುವುದು. ಶಿಕ್ಷಕರು ಮಾಡಿಸಿಕೊಂಡಿದ್ದಾರೆ. ಈಗಾಗಲೇ ಕೆಲವರ ವರದಿ ಬಂದಿದೆ ಎಂದು ತಿಳಿಸಿದರು.
ಹಲವು ತಿಂಗಳುಗಳ ಬಳಿಕ ಶಾಲೆ ಆರಂಭವಾಗಿದ್ದು ಶಾಲೆಯ ಬಳಿ ಮಕ್ಕಳ ಕಲರವ ಕೇಳಿ ಬಂತು.