ಕಟ್ಟುನಿಟ್ಟಾಗಿ ಲಾಕ್‍ಡೌನ್‍ಗೆ ಸಿದ್ಧತೆ: ಕುಲಕರ್ಣಿ

ಗುಳೇದಗುಡ್ಡ,ಏ 27: ಕೋವಿಡ್ 2ನೇ ಅಲೆ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳು ಘೋಷಿಸಿರುವ ಮಂಗಳವಾರದಿಂದ 14 ದಿನಗಳ ವರೆಗೆ ಲಾಕ್ ಡೌನ್ ಕಪ್ರ್ಯೊ ಕಟ್ಟುನಿಟ್ಟಾಗಿ ಜಾರಿಗೆ ತರಲು ತಾಲ್ಲೂಕ ಆಡಳಿತ ಸಿದ್ದತೆ ಮಾಡಿ ಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಹೇಳಿದರು.
ಸೋಮವಾರ ತಾಲ್ಲೂಕ ಕಚೇರಿಯಲ್ಲಿ ತಾಲ್ಲೂಕ ಮಟ್ಟದ ಅಧಿಕಾರಿಗಳ ಸಭೆಯ ನಂತರ ಪತ್ರಿಕಾಗೋ ಷ್ಠಿಯಲ್ಲಿ ಮಾತನಾಡಿದ ಅವರು. ಸರ್ಕಾರ ಲಾಕ್ ಡೌನ್ ಘೋಷಿಸಿದ ಹಿನ್ನೆಲೆ ಯಲ್ಲಿ ಪಟ್ಟಣಕ್ಕೆ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಮಹಾರಾಷ್ಟ್ರ, ಕೇರಳ, ಕಾಸರಗೂಡ, ಉಡುಪಿ, ಮಂಗಳೂರ ಗಳಿಂದ ಬರುವವರ ಬಗ್ಗೆ ನಿಗಾ ವಹಿಸಬೇಕು. ಪಟ್ಟಣದಲ್ಲಿ ಭಂಡಾರಿ ಕಾಲೇಜ್ ಹತ್ತಿರ, ಕೋಟೆಕಲ್ಲ ಗ್ರಾಮದ ಹತ್ತಿರ ಚೆಕ್ ಪೋಷ್ಟ ನಿರ್ಮಿಸಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಜನರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕೋವಿಡ್ ತಪಾಸಣೆ ಗೊಳಪಡಿಸಬೇಕು. ಕೋವಿಡ್ ಲಕ್ಷಣಗಳು ಕಂಡು ಬಂದರೆ ಅಂತವರನ್ನು ಅವರ ಮನೆಗಳಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ (ಹೊಂ ಕ್ವಾರಂಟೈನ್) ಇರುವಂತೆ ವ್ಯವಸ್ಥೆ ಮಾಡಲಾಗುವುದು.
ಇಂದು ಮಂಗಳವಾರ 27 ರಿಂದ 14 ದಿನಗಳ ವರೆಗೆ ಲಾಕ್ ಡೌನ್ ಘೋಷಿ ಸಲಾಗಿದೆ. 14 ದಿನಗಳವರೆಗೆ ಬೆಳಿಗ್ಗೆ 6 ರಿಂದ 10ರ ವರೆಗೆ ತರಕಾರಿ, ದಿನಸಿ, ಕಿರಾಣಿ ಅಂಗಡಿ, ಹಾಲು, ಹಣ್ಣಿನ ಅಂಗಡಿಗಳಿಗೆ ಅವಕಾಶ ಕಲ್ಪಿಸ ಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಔಷಧಿ, ಆಸ್ಪತ್ರೆಗೆ ಮುಕ್ತ ಅವಕಾಶ ಕಲ್ಪಿಸಿದೆ. ಬಸ್‍ಗಳ ಸಂಚಾರ ಸಂಪೂರ್ಣ ರದ್ದು ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆ ವರೆಗೆ ಎಲ್ಲವು ಬಂದಾಗಿರುತ್ತದೆ. ಈ ಅವಧಿಯಲ್ಲಿ ಮದುವೆ ಕೂಡಾ ರದ್ದು ಪಡಿಸಲಾಗಿದೆ. ಕೋವಿಡ್ ಕಾರ್ಯಾಚರಣೆಯಲ್ಲಿ ಪಟ್ಟಣಗಳಲ್ಲಿ ಪುರಸಭೆ ಮುಖ್ಯಾಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒ ನೇತೃತ್ವದಲ್ಲಿ ಮಾರ್ಷಲ್ ಪಡೆ ತಂಡ ರಚಿಸಲಾಗಿದೆ. ಗುರುವಾರದ ವಾರದ ಸಂತೆ ರದ್ದು ಪಡಿಸಲಾಗಿದೆ. ಕೋವಿಡ್ ಕೆಲಸ ಕಾರ್ಯಗಳಲ್ಲಿ ಅಧಿಕಾರಿಗಳು ನಿರ್ಲಕ್ಷತೆಯಿಂದ ಕೆಲಸ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಸಿಪಾರಸ್ ಮಾಡಲಾಗುವುದು. ಇದರಲ್ಲಿ ಯಾವುದೇ ಮುಲಾಜೇ ಇಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಾದಾಮಿ ಸಿಪಿಐ ರಮೇಶ ಹಣಾಪೂರ, ಪಿ.ಎಸ್.ಐ. ಪುಂಡಲೀಕ ಪಟಾತರ, ತಾ.ಪಂ. ಅಧಿಕಾರಿ ಸಿದ್ದಪ್ಪ ನಕ್ಕರಗುಂದಿ, ಕೃಷಿ ಅಧಿಕಾರಿ ಆನಂದ ಗೌಡರ, ಉಪತಹಶೀಲ್ದಾರ್ ವೀರೇಶ ಬಡಿಗೇರ, ಕಂದಾಯ ನಿರೀಕ್ಷಕ ಮಹಾಂತೇಶ ಅಂಗಡಿ, ವೈದ್ಯರು ಡಾ, ಅನೀಲ ಉಕ್ಕಲಿ, ಅಂಗನವಾಡಿ ಮೇಲ್ವಚಾರಕಿ ಸುಮಂಗಲಾ ಮಳ್ಳಿ, ರೇಣುಕಾ ಗೌಡರ, ಭುವನೇಶ್ವರಿ ಬರಹಾಣಪೂರ, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.