ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸಿ: ಅಭಿನವ್‍ಚಂದ್ರ

ಚಾಮರಾಜನಗರ, ಏ.25:- ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲಿದ್ದು, ಇದಕ್ಕೆ ಪೂರಕವಾಗಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯವೀಕ್ಷಕರಾದ ಅಭಿನವ್ ಚಂದ್ರ ಅವರು ತಿಳಿಸಿದರು.
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿಂದು ಚಾಮರಾಜನಗರ ವಿಧಾನಸಭಾಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಯಾದ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಮುಕ್ತವಾಗಿ ನಡೆಸಬೇಕು. ಈ ನಿಟ್ಟಿನಲಿ ಹಲವಾರು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಎಲ್ಲರು ಪೂರಕವಾಗಿ ನಡೆದುಕೊಳ್ಳಬೇಕು ಎಂದರು.
ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟೆಚ್ಚೆರ ವಹಿಸಲಾಗುತ್ತದೆ. ಚುನಾವಣಾ ಅಕ್ರಮಕ್ಕೆ ಕಾರಣವಾಗುವಂತಹ ಏನೇ ಕಂಡು ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುತ್ತದೆ. ಚುನಾವಣಾ ಸಂಬಂಧಿ ಅಕ್ರಮಗಳು ಏನೇ ಇರಲಿ ಅಥವಾಚುನಾವಣೆ ಕುರಿತ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಮುಕ್ತವಾಗಿ ಹೇಳಿಕೊಳ್ಳಬಹುದು ಎಂದರು.
ಚುನಾವಣಾ ಸಂಬಂಧಿ ದೂರುಗಳು ಇದ್ದಲ್ಲಿತಮ್ಮನ್ನುದೂರವಾಣಿ ಮೂಲಕ ಸಂಪರ್ಕಿಸಬಹುದು. ವಾಟ್ಸಾಪ್, ಎಸ್.ಎಂ.ಎಸ್. ಮೂಲಕವು ಗಮನಕ್ಕೆ ತರಬಹುದು. ಅಲ್ಲದೇ ನಿಗದಿತ ಅವಧಿಯಲ್ಲಿ ಭೇಟಿ ಮಾಡಿಯೂ ಅಹವಾಲು ಸಲ್ಲಿಸಬಹುದು ಎಂದು ಚುನಾವಣಾ ವೀಕ್ಷಕರು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನ ಅನುಸಾರ ಸಂಬಂಧಿಸಿದ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೋಲಿಂಗ್‍ಏಜೆಂಟರ ನೇಮಕ ಮಾಡಿಕೊಳ್ಳಬೇಕು. ಏಜೆಂಟರಿಗು ಚುನಾವಣಾ ಸಂಬಂಧಿ ಪೂರ್ಣ ಮಾಹಿತಿ ನೀಡಬೇಕು. ವಿದ್ಯುನ್ಮಾನ ಮತಯಂತ್ರರ್ಯಾಂಡ ಮೈಜೇಶನ್ ಪ್ರಕ್ರಿಯೆಯನ್ನು ಅಭ್ಯರ್ಥಿಗಳ, ಅವರ ಏಜೆಂಟರ ಸಮ್ಮುಖದಲ್ಲಿ ಮಾಡಲಾಗುತ್ತದೆ ಎಂದು ಚುನಾವಣಾ ಸಾಮಾನ್ಯ ವೀಕ್ಷಕರಾದ ಅಭಿನವ್‍ಚಂದ್ರ ತಿಳಿಸಿದರು.
ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಹಿಮಾಮ್ಷುಪಿ. ಜೋಶಿ ಅವರುಮಾತನಾಡಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಆಯೋಗ ನಿಗದಿ ಪಡಿಸಿರುವ ವಹಿಯಲ್ಲಿ ವೆಚ್ಚ ನಿರ್ವಹಿಸಬೇಕಾಗುತ್ತದೆ. ಅಭ್ಯರ್ಥಿಗಳು ವೈಯಕ್ತಿಕ ಬ್ಯಾಂಕ್ ಖಾತೆಯಲ್ಲಿಯೇ ಪ್ರತಿ ವಹಿವಾಟನ್ನು ನಡೆಸಬೇಕಾಗುತ್ತದೆ. ಹಣ ಸ್ವೀಕಾರ, ಪಾವತಿಯನ್ನು ಬ್ಯಾಂಕ್ ಖಾತೆಯ ಮುಖಾಂತರವೇ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಮಾಡಲಾದ ವೆಚ್ಚ ವಿವರಕುರಿತ ವಹಿಯನ್ನು ಪರಿಶೀಲಿಸಲಾಗುತ್ತದೆ. ವೆಚ್ಚ ಪರಿಶೀಲನೆಗಾಗಿ ನಿಗದಿ ಮಾಡುವ ದಿನಾಂಕದಂದು ವಿವರವನ್ನು ಸಲ್ಲಿಸಬೇಕು. ಎಲ್ಲ ವಿವರಗಳು ನಮೂದಾಗಿರಬೇಕು. ವಿವರ ಸಲ್ಲಿಸದಿದ್ದಲ್ಲಿಕ್ರಮ ವಹಿಸಲಾಗುತ್ತದೆಎಂದುವೆಚ್ಚ ವೀಕ್ಷಕರಾದಹಿಮಾಮ್ಷಪಿ. ಜೋಶಿ ಅವರು ತಿಳಿಸಿದರು.
ಚಾಮರಾಜನಗರ ವಿಧಾನಸಭಾಕ್ಷೇತ್ರದ ಚುನಾವಣಾ ಅಧಿಕಾರಿಯಾಗಿರುವಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕÀ ಯೋಗಾನಂದ, ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್ ಐ.ಈ. ಬಸವರಾಜು ಅಭ್ಯರ್ಥಿಗಳು ಪಾಲಿಸಬೇಕಿರುವ ಮಾದರಿ ನೀತಿ ಸಂಹಿತೆಚುನಾವಣಾ ಸಂಬಂಧಿತ ಇನ್ನಿತರ ವಿವರಗಳನ್ನು ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.