ಕಟ್ಟಿಗೆ ಅಡ್ಡೆಗೆ ಬೆಂಕಿ

ಧಾರವಾಡ,ಮಾ8 : ನಗರದ ಮಣಿಕಿಲ್ಲಾ ಬಳಿಯಿರುವ ಕಟ್ಟಿಗೆ ಅಡ್ಡೆಗೆ ಬೆಂಕಿ ತಗುಲಿ ಅದು ಹೊತ್ತಿ ಉರಿದಿದೆ.
ಏಕಾ ಏಕಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯುಂಟುಯಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದರು.
ಬೆಂಕಿ ತಗುಲುವುದಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಧಾವಿಸಿದ ಧಾರವಾಡ ಶಹರ ಪೆÇಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.