ಕಟ್ಟಡ ಪರವಾನಿಗೆ ಪ್ರಕ್ರಿಯೆ ಸುಗಮ ಆಯುಕ್ತರ ಭರವಸೆ

ಧಾರವಾಡ,ನ14 ಮಹಾನಗರ ಪಾಲಿಕೆಯ ಸಭಾವನದಲ್ಲಿ ಕಟ್ಟಡ ಪರವಾನಿಗೆ ಹಾಗೂ ಮುಕ್ತಾಯ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬವಾಗುತ್ತಿರುವ ಕುರಿತಾಗಿ ಅನೇಕ ಸಮಸ್ಯೆಗಳನ್ನು ಚರ್ಚಿಸಲು ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಡಿಡಿಟಿಪಿ ಹಾಗೂ ಎಲ್ಲ ವಲಯ ಕಚೇರಿಯ ಸಹಾಯಕ ಆಯುಕ್ತರು ಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಇಂಜಿನಿಯರ್ಸ್ ಗಳಿಗೆ ಕಟ್ಟಡ ಪರವಾನಿಗೆ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳನ್ನು ಅಸೋಸಿಯೇಷನ್ನಿನ ಅಧ್ಯಕ್ಷರಾದ ಸುನಿಲ್ ಬಾಗೇವಾಡಿ ಅವರು ವಿವರವಾಗಿ ಸಭೆಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು ಸಮಸ್ಯೆಗಳನ್ನು ಪರಿಹರಿಸಿ ವಿಳಂಬವಾಗುವುದನ್ನು ಬಗೆಹರಿಸಲು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು . ಇನ್ನು ಮುಂದೆ ಕಟ್ಟಡ ಪರವಾನಿಗೆಯನ್ನು ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಿ ಅತ್ಯಂತ ಶೀಘ್ರದಲ್ಲಿ ಪರವಾನಿಗೆ ದೊರೆಯುವಂತೆ ಮಾಡುವುದಾಗಿ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರುಗ ಳ ಆದ ಶ್ರೀ ವಿಜಯೇಂದ್ರ ಪಾಟೀಲ್ ಶ್ರೀ ಸಂಜಯ ಕಬ್ಬೂರ್, ಶ್ರೀ ವಿಜಯ್ ತೋಟಗೇರ, ಅರುಣ್ ಶೀಲವಂತ್, ವಿಜಯ್ ಹಳ್ಳಿಕೇರಿ, ಸಿದ್ದು ಪಾಟೀಲ, ಶಿವಾನಂದ ಯಳವತ್ತಿ, ಶಿವಾನಂದ್ ಯಲವತ್ತಿಮಠ, ಕಬೀರ ನದಾಫ, ಶಮಶುದ್ದೀನ ದಿಡಗೂರ, ಸುನಿಲ್ ಗೋಗಿ, ದಾಮೋದರ್ ಹೆಗಡೆ, ಅಜಿತ ಕರೋಗಲ ಹಾಗೂ ಮುಂತಾದವರು ಭಾಗವಹಿಸಿದ್ದರು ಪಾಲಿಕೆಯ ಅಧಿಕಾರಿ ಗಳಾದ ಶ್ರೀ ರಾಘವೇಂದ್ರ ಕುಲಕರ್ಣಿ ಅವರು ವಂದಿಸಿದರು.