ಕಟ್ಟಡ ತೆರವು ಸೂಚನೆ ಕಾರ್ಯ ಆರಂಭ


ಬ್ಯಾಡಗಿ,ಮಾ.1: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪುರಸಭೆಯ ಅಧಿಕಾರಿಗಳು ಗುರುವಾರ ಸಂಜೆಯಿಂದ ರಸ್ತೆಯ ಪಕ್ಕದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಲೀಕರಿಗೆ ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡುವ ಕಾರ್ಯ ಪ್ರಾರಂಭಿಸಿದ್ದಾರೆ.
ಗುರುವಾರದಿಂದ ಉಪವಿಭಾಗಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶಿಥಿಲಗೊಂಡ ಕಟ್ಟದ ಮಾಲೀಕರಿಗೆ ಸೂಚನೆ ನೀಡುವ ಕಾರ್ಯ ಭರದಿಂದ ಸಾಗಿದೆ. ಅಗಲೀಕರಣದ ರಸ್ತೆಯ ಅಕ್ಕಪಕ್ಕದಲ್ಲಿರುವ ಶಿಥಿಲಗೊಂಡ ಕಟ್ಟಡದ ಮಾಲೀಕರಿಗೆ ಸ್ವಯಂ ತೆರವಿಗೆ ಅಂತಿಮ ದಿನ ನೀಡಿದ್ದು, ಅದರೊಳಗಾಗಿ ಮಾಲೀಕರು ತಮ್ಮ ಕಟ್ಟಡಗಳನ್ನು ತೆರವುಗೊಳಿಸದೇ ಇದ್ದಲ್ಲಿ, ಪುರಸಭೆಯ ವತಿಯಿಂದಲೇ ಕಟ್ಟಡಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ
ಎಚ್.ಪಿ.ಚನ್ನಪ್ಪ, ತಹಶೀಲ್ದಾರ ಪುಟ್ಟರಾಜಗೌಡ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಪಿಎಸ್’ಐ ಅರವಿಂದ್ ಬಿ ಎಸ್, ಪಿಡಬ್ಲ್ಯೂಡಿ ಎಇಇ ಉಮೇಶ ನಾಯಕ್, ಪುರಸಭೆ ಹಾಗೂ ತಾಲೂಕ ಆಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು