ಕಟ್ಟಡ ಕಾರ್ಮಿಕ ಒಕ್ಕೂಟದಿಂದ ಆಹಾರ ಪೂರೈಕೆ

ಬೆಂಗಳೂರು, ಮೇ.೨೦: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ ಹಾಗೂ ಉದಯ ನ್ಯೂಸ್ ಕರ್ನಾಟಕ ವೆಬ್ ಚಾನೆಲ್ ಜಂಟಿಯಾಗಿ ಸದ್ದಿಲ್ಲದೆ ರಾಜಾಜಿನಗರ, ಶಿವನಗರ ಹಾಗೂ ಸುತ್ತಮುತ್ತಲಿನ ಬಡ ಕೂಲಿ ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ಪೂರೈಸುವ ಸತ್ಕಾರ್ಯದಲ್ಲಿ ತೊಡಗಿವೆ.
ನಿತ್ಯ ೫೦೦ ಬಡ ಕೂಲಿಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ಗುರಿಯೊಂದಿಗೆ ಈ ಸಂಸ್ಥೆಗಳು ಸೇವೆಯಲ್ಲಿ ತೊಡಗಿವೆ. ಇವರಿಗೆ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಚಲನಚಿತ್ರ ನಿರ್ಮಾಪಕ ಜಿ. ಗಂಗಾಧರ್ ಹಾಗೂ ಅವರ ಗೆಳೆಯರು ಕೈ ಜೋಡಿಸಿದ್ದಾರೆ.
ರಸ್ತೆಬದಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ತೊಡಗಿರುವ ಕೂಲಿ ಕಾರ್ಮಿಕರು, ಪ್ಲೈ ಓವರ್ ಕಾರ್ಮಿಕರು ಸೇರಿ
ದಂತೆ, ದಿನಕ್ಕೆ ೫೦೦ ಮಂದಿಗೆ ಆಹಾರ ನೀಡಲಾಗುತ್ತಿದೆ. ಬಾಪೂಜಿನಗರ ಮತ್ತು ನಾಗರಬಾವಿ ಎರಡು ಕಡೆ ಆಹಾರ ತಯಾರಿಸಿ ಪೊಟ್ಟಣ ಕಟ್ಟಿ ರೆಡಿ ಮಾಡಿಕೊಳ್ಳಲಾಗುತ್ತಿದೆ. ವಿಶೇಷ ಅಂದರೆ, ಅಡುಗೆ ಮಾಡಿ ಪೊಟ್ಟಣಗಳನ್ನು ಕಟ್ಟಿಕೊಡುವ ಭಟ್ಟರು ಸಹ ಹಣ ಪಡೆಯದೆ ಸೇವಾ ಮನೋಪೂರ್ವಕವಾಗಿ ಮಾಡಿಕೊಡುವ ಮೂಲಕ ಹೃದಯ ವಿಶಾಲತೆ ಮೆರೆದಿದ್ದಾರೆ.
ತಯಾರಾದ ಆಹಾರ ಪೊಟ್ಟಣಗಳನ್ನು ಕಟ್ಟಡ ಕಾರ್ಮಿಕರ ಒಕ್ಕೂಟದ ಕಾರ್ಮಿಕ ರಥ (ಮಾರುತಿ ವ್ಯಾನ್) ನಲ್ಲಿ ಕಾರ್ಮಿಕರು ಇರುವ ಕಡೆಗೆ ಹೋಗಿ ವಿತರಿಸಲಾಗುತ್ತಿದೆ.