ಕಟ್ಟಡ ಕಾರ್ಮಿಕರ ವೇತನ ಹೆಚ್ಚಿಸಲು ಸಭೆ ನಿರ್ಣಯ

ಕಲಬುರಗಿ:ಮಾ.23: ನಗರದ ಪಬ್ಲಿಕ್ ಗಾರ್ಡನ್‍ನಲ್ಲಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಕಾರ್ಮಿಕರ ಸಂಬಳ (ಪಗಾರ,ದಿನಗೂಲಿ) ಹೆಚ್ಚಳ ಸೇರಿ ಹಲವಾರು ವಿಷಯಗಳ ಕುರಿತು ಸಭೆ ಜರುಗಿತು.
ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷ ಭೀಮರಾಯ ಕಂದಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ಮರೆಪ್ಪ ರೊಟ್ಟನಡಗಿ ಸಭೆಯಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಮತ್ತು ದಿನಿಸಿ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದೆ. ಕಟ್ಟಡ ಕಾರ್ಮಿಕರ ದಿನಗೂಲಿ ಮಾತ್ರ ಕಡಿಮೆ ಇದೆ. ಕಟ್ಟಡ ಸಾಮಗ್ರಿ ಸರಿಯಾದ ಸಮಯದಲ್ಲಿ ಸಿಗಲಿಲ್ಲ ಎಂದು ಕೆಲಸವಿಲ್ಲದೆ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಟ್ಟಡ ಕಾರ್ಮಿಕರಿಗೆ ದಿನಗೂಲಿ ಮತ್ತು ಗುತ್ತಿಗೆದಾರರ ಭತ್ತ ಹೆಚ್ಚಳ ಮಾಡಬೇಕು. ಹಾಗೂ ಸರದಿ ಸಂಘಕ್ಕೆ ಇನ್ನೂ ಹೆಚ್ಚನ ಜನ ಸದಸ್ಯರ ನೇಮಕಾತಿ ಮಾಡುವುದರ ಬಗ್ಗೆ ತಿರ್ಮಾನಿಸಲಾಯಿತು.
ಶರಣಪ್ಪ ಉಳ್ಳಾಗಡ್ಡಿಘಿ ಬಳಚಕ್ರ, ಶಂಕರ ಬಡಿಗೇರ, ಸಿದ್ದು ರಾಜಾಪುರ, ಅಪ್ಪಣ್ಣ ಹನುಮಂತ ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.