ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ  

ಸಂಜೆವಾಣಿ ವಾರ್ತೆ
ದಾವಣಗೆರೆ: ಕಟ್ಟಡ ಕಟ್ಟುವ ಮತ್ತು ಇತರೆ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯೂಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇಲ್ಲಿನ ಶಿವನಗರ ಮುಖ್ಯರಸ್ತೆಯಲ್ಲಿನ ಲಕ್ಕಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಸಾಮಾಜಿಕ ಕಾರ್ಯಕರ್ತ ಹಾಗೂ ಭಾರತೀಯ ಜನಕಲಾ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ. ಷಣ್ಮುಖಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘಟಿತ ಬಲದಿಂದ ಮಾತ್ರ ದುಡಿಯುವ ವರ್ಗದ ಭವಿಷ್ಯ ಭದ್ರವಾಗುವುದೇ ಹೊರತು ಯಾವುದೇ ಒಬ್ಬ ವ್ಯಕ್ತಿಯಿಂದಲ್ಲ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಕಾಳಜಿ ವಹಿಸಿ ಅವರಲ್ಲಿನ ಪ್ರತಿಭೆಗೆ ಸನ್ಮಾನಿಸುವ ಸಂಘದ ನಡೆ ಪ್ರಶಂಸನೀಯ.  ಎಂದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎನ್.ಎಂ. ಆಕಾಶ್, ಎಂ.ವೈ. ಅಂಕಿತ, ಹೆಚ್.ರಿತು, ಎಸ್. ಕವಿತ, ತಮನ್ನಾ ಹಾಗೂ ದ್ವಿತೀಯ ಪಿಯೂಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಜಿ.ಎಂ. ಭೂಮಿಕಾ, ದರ್ಶನ್, ಎ.ಎನ್ ವರ್ಷ, ಜಿ.ಎ. ಪ್ರಜ್ವಲ್ ಪಾಟೀಲ್, ಮೊಹಮ್ಮದ್ ರಹಮತ್ ಉಲ್ಲಾ ಇವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘ ಪದಾಧಿಕಾರಿಗಳದ ಜಾವೀದ್ ಬಾಷ, ಮುಬಾರಕ್ ಅಲಿ, ಅಬ್ದುಲ್ ರಜಾಕ್, ಫ಼ೆಯಾಜ್, ಸುಬಾನ್ ಸಾಬ್, ರಹೇಮಾನ್, ನಫೀಜ್, ಮುತ್ತಣ್ಣ ಮತ್ತು ಇರ್ಫಾನ್ ಅಹಮದ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.