ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಿಐಟಿಯುನಿಂದ ಕಾರ್ಮಿಕ ಕಾರ್ಯದರ್ಶಿಗೆ ಮನವಿ.

ಕೂಡ್ಲಿಗಿ. ಡಿ. 8 :- ಕಟ್ಟಡ ಕಾರ್ಮಿಕರಿಗೆ ಮಂಡಳಿ ಘೋಷಿಸಿದ ಎಲ್ಲಾ ಸೌಲಭ್ಯ ಜಾರಿಗೊಳಿಸುವ ಮೂಲಕ ಇತರೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೂಡ್ಲಿಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪದಾಧಿಕಾರಿಗಳು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾರ್ಮಿಕ ಮಂಡಳಿಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.  ಈ ಪ್ರತಿಭಟನೆಯ ನೇತೃತ್ವವವನ್ನು ಸಿಐಟಿಯು  ತಾಲೂಕು ಸಂಚಾಲಕ ಗುನ್ನಳ್ಳಿ ರಾಘವೇಂದ್ರವಹಿಸಿ  ಮಾತನಾಡುತ್ತ ಮಂಡಳಿ ಘೋಷಿಸಿದ ಎಲ್ಲಾ ಸೌಲಭ್ಯಗಳು ಜಾರಿಯಾಗಬೇಕು ಹಾಗೂ ಬಾಕಿ ಇರುವ ಸಾವಿರಾರು ಅರ್ಜಿಗಳು ಕೂಡಲೇ ಇತ್ಯರ್ಥಗೊಳಿಸಿ ಈಗಾಗಲೇ ನಡೆದಿರುವ ಸಭೆಗಳ ನಡಾವಳಿಗಳನ್ನು ಜಾರಿಗೊಳಿಸಬೇಕು ಎಂದು ರಾಜ್ಯಾದ್ಯಾಂತ ನಡೆಯುವ ಪ್ರತಿಭಟನೆಯಂತೆ ಕೂಡ್ಲಿಗಿಯಲ್ಲೂ ಪ್ರತಿಭಟನೆ ನಡೆಸಿ ತಾಲೂಕು ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕ ಮಂಡಳಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ಉಮೇಶ್, ಪ್ರಹ್ಲಾದ್, ಅಂಜಿನಪ್ಪ, ಮಾರೇಶ, ಸಣ್ಣಬಸಪ್ಪ, ನಾಗರಾಜ, ದಾದಾಪೀರ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.