ಕಟ್ಟಡ ಕಾರ್ಮಿಕರ ನಿರಂತರ ಹೋರಾಟದಿಂದ ಕಲ್ಯಾಣ ಮಂಡಳಿ ಸ್ಥಾಪನೆ

ಸಂಡೂರು, ನ.8: ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ಹೆಸರನ್ನ ದಾಖಲಿಸಿಕೊಳ್ಳುವ ಮೂಲಕ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಿ.ಐ.ಟಿ.ಯು ಸಂಘಟನಾ ಮುಖಂಡ ಕೂಡ್ಲಿಗಿಯ ವಿರುಪಾಕ್ಷಪ್ಪ ಕರೆ ನೀಡಿದರು.
ತಾಲ್ಲೂಕಿನ ಸೋವೇನಹಳ್ಳಿ ಕಟ್ಟಡ ಕಾರ್ಮಿಕರ ಫೆಡರೇಶನ್ ಗ್ರಾಮಘಟಕವನ್ನು ಉದ್ಘಾಟಿಸಿ ಮಾತನಾಡುತ್ತಾ, ಹೆಸರು ನೋಂದಣಿ ಕಟ್ಟಡ ಕಾರ್ಮಿಕರ ಆದ್ಯತೆಯ ಕರ್ತವ್ಯವಾಗಿದೆ. ಕಟ್ಟಡ ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಘವೇಂದ್ರ ಕೂಡ್ಲಿಗಿ, ಕೆ.ಕೆ. ಹಟ್ಟಿ, ಹನುಂತಪ್ಪ ಹುಚ್ಚೇನಹಳ್ಳಿ ನಾಗರಾಜ ಉಪಸ್ಥಿತರಿದ್ದರು.