ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೧: ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಂಘವು ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದುದು. ಸಹಕಾರ ಸಂಘದ ಸೌಲಭ್ಯಗಳನ್ನು ಬಳಸಿಕೊಂಡು ಕಟ್ಟಡ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು ಎಂದು ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕರೆ ನೀಡಿದರು. ದಾವಣಗೆರೆಯ ಅಶೋಕ ರಸ್ತೆಯಲ್ಲಿರುವ ಕಾಮ್ರೇಡ್ ಪಂಪಾಪತಿ ಭವನದಲ್ಲಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದ 8 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ದಿನಮಾನದಲ್ಲಿ ಹಣಕಾಸು ಸಂಸ್ಥೆಯನ್ನು ನಡೆಸುವುದು ತುಂಬಾ ಕಷ್ಟದಾಯಕವಾಗಿರುವಾಗ ಕಾರ್ಮಿಕ ಸಂಘವೊAದು ತನ್ನ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕಳೆದ 8 ವರ್ಷಗಳಿಂದ ನಿರಂತರವಾಗಿ ಸಹಕಾರ ಸಂಘವನ್ನು ಮುನ್ನೆಡೆಸಿಕೊಂಡು ಬರುತ್ತಿರುವುದು ಸಂತೋಷದ ವಿಷಯ ಎಂದರು. ಕಾರ್ಮಿಕರು ತಮ್ಮ ಕಷ್ಟಾರ್ಜಿತದ ಉಳಿತಾಯದ ಹಣವನ್ನು ಈ ಸಹಕಾರ ಸಂಘದಲ್ಲಿ ಠೇವಣಿ ಇಡುವುದರ ಮೂಲಕ, ದಿನವಹಿ ಪಿಗ್ಮಿ ಕಟ್ಟುವುದರ ಮೂಲಕ ಹೆಚ್ಚಿನ ವ್ಯವಹಾರವನ್ನು ಮಾಡಬೇಕು. ಜೊತೆಗೆ ತಮ್ಮ ಕಷ್ಟ ಕಾಲದಲ್ಲಿ ಸಹಕಾರ ಸಂಘದಿAದ ಸಾಲವನ್ನು ಪಡೆದು ಕ್ಲಪ್ತ ಸಮಯದಲ್ಲಿ ಅದರ ಮರುಪಾವತಿ ಮಾಡಬೇಕು. ಹಾಗಾದಲ್ಲಿ ಮಾತ್ರ ಸಹಕಾರ ಸಂಘಗಳು ಉಳಿಯಲು ಸಾಧ್ಯವೆಂದು ತಿಳಿಸಿದರು.ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜಿ.ಉಮೇಶ್ ಅವರಗೆರೆ ಮಾತನಾಡಿ, ಕಾರ್ಮಿಕರಿಗಾಗಿ ಈ ಸಹಕಾರ ಸಂಘವನ್ನು ಸ್ಥಾಪಿಸಿದ್ದೇವೆ. ಸಹಕಾರ ಸಂಘ ಸ್ಥಾಪನೆಯಾಗಿ 8 ವರ್ಷದ ಬಳಿಕ 2022-23ರ ಸಾಲಿನಲ್ಲಿ ಲಾಭ ದಾಖಲಿಸುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದುಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಕಾರ್ಮಿಕ ಮುಖಂಡರಾದ ಆನಂದರಾಜ್, ಮೊಹಮದ್ ಭಾಷಾ, ಗುಡಿಹಳ್ಳಿ ಹಾಲೇಶ್,ಸಹಕಾರ ಸಂಘದ ಉಪಾಧ್ಯಕ್ಷ ಪಿ.ಕೆ.ಲಿಂಗರಾಜ್, ನಿರ್ದೇಶಕರುಗಳಾದ ವಿ.ಲಕ್ಷ÷್ಮಣ್, ಟಿ.ಭೀಮಾರೆಡ್ಡಿ, ಡಿ.ಷಣ್ಮುಗಂ, ಜಿ.ಆರ್.ನಾಗರಾಜ್, ಸೈಯದ್ ಗೌಸ್‌ಪೀರ್, ಶಿವಕುಮಾರ್ ಡಿ.ಶೆಟ್ಟರ್, ಹಾಲಮ್ಮ, ಎಸ್.ಮುರುಗೇಶ್, ಎಸ್.ಎಂ.ಸಿದ್ದಲಿAಗಪ್ಪ್, ಎಂ.ಮುತ್ತೇಶ್, ಫಯಾಜ್ ಅಹ್ಮದ್, ಕಾರ್ಯದರ್ಶಿ ಕೆ.ಆಶಾ, ಸಿಬ್ಬಂದಿಗಳಾದ ಯು.ವಿಶಾಲಾಕ್ಷಿ, ಎಸ್.ಕವಿತಾ ಹಾಗೂ ಬಿ.ಸಿ.ಹರೀಶ್ ಇದ್ದರು.