ಕಟ್ಟಡ ಕಾರ್ಮಿಕರಿಗೆ ಕಿಟ್‍ಗಳ ವಿತರಣೆ: ಸೌಲಭ್ಯಗಳ ಸದುಪಯೋಗಕ್ಕೆ ಕರೆ

ಕಲಬುರಗಿ,ಸೆ.7: ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಉಪ ಆಯುಕ್ತ ಡಿ.ಜಿ. ನಾಗೇಶ್ ಅವರು ಹೇಳಿದರು.
ಕಾರ್ಮಿಕ ಇಲಾಖೆ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಚಿತ್ತಾಪುರ ಹಾಗೂ ಶಹಾಬಾದ್ ತಾಲ್ಲೂಕಿನ ಕಟ್ಟಡ ಕಾರ್ಮಿಕರಾದ ಸೆಂಟರಿಂಗ್, ಮೇಸನ್ (ಗೌಂಡಿ), ಪೇಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ಹಲವಾರು ಯೋಜನೆಗಳ ಮೂಲಕ ಅನುಕೂಲಗಳನ್ನು ಮಾಡುತ್ತಿದೆ ಎಂದರು.
ಕಾರ್ಮಿಕ ಸಹಾಯಕ ಆಯುಕ್ತ ಅವಿನಾಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಎಸ್. ಸುಂಧರ್ ಹಾಗೂ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಹಾಗೂ ಕಲಬುರ್ಗಿ ಮತ್ತು ಚಿತ್ತಾಪುರ ತಾಲೂಕಿನ ಕಾರ್ಮಿಕ ನೀರಿಕ್ಷಕಿ ಶ್ರೀಮತಿ ಕವಿತಾ ಬಂಗರಿಗೆ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರು, ತಿಮ್ಮಯ್ಯ ಮಾನೆ, ಚಂದ್ರು ಮಾಳಗಿ, ಆನಂದ್ ಜಿನಕೇರಿ, ಕಟ್ಟಡ ಕಾರ್ಮಿಕರಾದ ಸುಂದರ್, ಶರಣಪ್ಪ ಚಿತ್ತಾಪೂರ್, ಸಂತೋಷ್ ಅಬ್ರಾಹಂ, ಮಲ್ಲಿಕಾರ್ಜುನ್ ಮಾಳಗಿ, ಚಾಂದಸಾಹೇಬ್, ಖದೀರ್, ಸಿದ್ದಲಿಂಗ್ ಕುಂಬಾರ್, ಮಲ್ಲಿಕಾರ್ಜುನ್ ಕುಂಬಾರ್ ಮುಂತಾದವರು ಉಪಸ್ಥಿತರಿದ್ದರು.