ಕಟ್ಟಡ ಕಾರ್ಮಿಕರಿಂದ ೭೭ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ದೇವದುರ್ಗ,ಆ.೧೫-
ಪಟ್ಟಣದ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ೭೭ ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಧ್ಯಕ್ಷ ಅಲ್ಲಿ ಸಾಬ ಬುವಾಜಿ ಧ್ವಜಾರೋಹಣ ನೆರೆವೇರಿಸಿದರು.
ನಂತರ ಮಾತನಾಡಿದ. ಅವರು ಬ್ರಿಟಿಷರ ಕೈಯಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಹಲವಾರು ಮಹನೀಯರು ಪ್ರಾಣ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ. ಅವರ ಆದರ್ಶ ಗುಣಗಳು ಯುವಕರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಾವಸಲಿ ಇಡುಪನೂರು, ಮಲ್ಲಪ್ಪ ಮಸರಕಲ್, ಶಿವರಾಜ ಪೂಜಾರಿ, ಮೌನೇಶ, ರಾಮಣ್ಣ ಗೋಸಲ್, ಬೂದೆಪ್ಪ ತೆಗ್ಗಿಹಾಳ, ರಂಗಪ್ಪ ಪೂಜಾರಿ ಕಾಸಿಂಸಾಬ ಬಂದನ, ಹನುಮಂತರಾಯ ಗಂಗೆ ಕರಿಗುಡ್ಡ, ಭೀಮರಾಯ, ಉಸ್ಮನ್ ಮಂಲಕಲ್, ಜಹೀರ ಇಡಪನೂರ, ಸೇರಿದಂತೆ ಇತರರು ಇದ್ದರು.