
ಮಲಿಕಪಾಶಾ ಮೌಜನ್
ವಾಡಿ:ಮೇ.11: ನೂತನ ಶಹಾಬಾದ ತಾಲ್ಲೂಕಿನ ರಾವೂರ ಗ್ರಾಮದ ಕಟ್ಟಡ ಕಾರ್ಮಿಕನಾದ ನಸೀರೋದ್ದಿನ್ ಫತೇಖಾ ಎಂಬ ಕಟ್ಟಡ ಕಾರ್ಮಿಕನ ಮಗಳಾದ ತಬಸುಮ ತಂದೆ ನಸೀರೋದ್ದಿನ್ ಫತೇಖಾ ಇತಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 604 ಅಂಕ ಪಡೆದು ಶೇಕಡಾ 96.64 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಾಸಾಗಿರುವುದು ಕಂಡು ತಾಯಿ-ತಂದೆ ಆನಂದ ಬಾಷ್ಪ ಸುರಿಸಿದ್ದಾರೆ.
ತಾತನ ಕಾಲದಂದಲೂ ವೃತ್ತಿಯಾಗಿ ಗೌಂಡಿ ಕೆಲಸ ಮಾಡಿಕೊಂಡು ಬಂದಿರುವ ಫತೇಖಾ ಕುಟುಂಬವು ಆರ್ಥಿಕ ಸಂಕಷ್ಟದಿಂದ ಅಷ್ಟು-ಇಷ್ಟು ಎನ್ನುವಷ್ಟರ ಮಟ್ಟಿಗೆ ವಿಧ್ಯಾಭ್ಯಾಸ ಪಡೆದಕೊಂಡವರು. ಆದರೆ, ಇತ್ತಿಚ್ಚಿನ ದಿನಗಳಲ್ಲಿ ಫತ್ತೇಖಾ ಕುಟುಂಬದ ಮಕ್ಕಳು ವಿಧ್ಯಾಭ್ಯಾಸದಲ್ಲಿ ಮುಂದೆ ಸಾಗುತಿರುವುದು ಖುಷಿಯಾ ಸಂಗತಿ ಎಂದು ವಿಧ್ಯಾರ್ಥಿನಿ ತಂದೆ ನಸೀರೋದ್ದಿನ್ ಮಾತು.
ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆ ವಿಧ್ಯಾಥಿನಿ ತಬಸುಮ ಕೇವಲ ಪರೀಕ್ಷಾ ಸಮಯದಲ್ಲಿ ಓದದೇ ನಿತ್ಯ ಶಾಲೆಯಲ್ಲಿ ಹೇಳಿರುವ ಪಾಠವನ್ನು ಅಂದೇ ಓದುವ ಹವ್ಯಾಸವನ್ನು ಬೆಳಿಸಿಕೊಂಡಿದ್ದಳು. ಅಲ್ಲದೇ ಪರೀಕ್ಷಾ ಸಮಯದಲ್ಲಿ 7-8 ತಾಸು ವಿಧ್ಯಾಭ್ಯಾಸವನ್ನು ಮಾಡುವ ರೂಡಿ ಬೆಳಿಸಿಕೊಂಡಿದ್ದಳು. ಶಾಲೆಯಲ್ಲಿ ನಡೆಯುವ ಚಟುವಟಿಕೆಳಲ್ಲಿ ತುಂಬಾ ಆಕ್ಟೀವವಾಗಿ ಭಾಗವಹಿಸುತ್ತಿದ್ದಳು. ಅಲ್ಲದೇ ಶಾಲೆಯಲ್ಲಿ ಶಿಕ್ಷಕರು ಯಾವುದೇ ವಿಷಯ ಅರ್ಥವಾಗದೇ ಮನಮುಟ್ಟದಿದ್ದಾಗ ಅತ್ಯಂತ ತಾಳ್ಮೆ-ಸಂಯಮದಿಂದ ಸರಳವಾಗಿ ತಿಳಿಯುವ ಹಾಗೇ ಭೋದನೆ ಮಾಡುತ್ತಿದ್ದರು. ತಾಲ್ಲೂಕ ಮಟ್ಟದಲ್ಲಿ 3ನೇ ಸ್ಥಾನ ಪಡೆದುಕೊಂಡರೇ ತನ್ನ ಶಾಲೆಗೆ ಟಾಪರ್ ಆಗಿ ಹೋರ ಹೊಮ್ಮಿರುವುದು ವಿಧ್ಯಾರ್ಥಿನಿ ಓದು ಶಾಲೆಗೆ ಕೀರ್ತಿ ತಂದಿದೆ. ವಿಧ್ಯಾರ್ಥಿನಿ ಈ ಸಾಧನೆಗೆ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮುಖ್ಯೋಪಾಧಯರು, ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂದೆ ಡಾಕ್ಟರ್ ಆಗಬೇಕೆಂಬ ಕನಸು ಹೊತ್ತಿರುವ ತಬಸುಮಗೆ ಬಡತನ ಅಡ್ಡಿಯಾಗಿದೆ. ಗೌಂಡಿ ಕೆಲಸದಿಂದ ಬರುವ ಕೂಲಿ ಹಣದಿಂದ ಮಗಳನ್ನು ಓದಿಸುತ್ತೆನೆ ಎನ್ನುವ ಛಲ ತಂದೆಯಾದಾಗಿದ್ದರು. ಕೂಲಿಕಾರ್ಮಿಕನ ಮಗಳ ಓದಿಗೆ ಸರ್ಕಾರ ಕೂಡಾ ಸಹಕಾರ ನೀಡಬೇಕಾದ ಅನಿವಾರ್ಯತೆ ಇದೆ.
ನನ್ನ ತಂದೆ ಕೂಲಿ ಕೆಲಸ ಮಾಡಿ ನನಗೆ ಓದಿಸುತ್ತಿದ್ದಾರೆ. 10ನೇ ತರಗತಿಯಲ್ಲಿ ಉತ್ತಮ ಅಂಕ ಬಂದಿದೆ. ಮುಂದೆ ಡಾಕ್ಟರ್ ಆಗಬೇಕೆಂಬ ಕನಸಿದೆ. ಹೇಳಿಕೊಳ್ಳುವಷ್ಟು ಸುಲಭವಲ್ಲ. ಸಾಕಷ್ಟು ಹಣ ಬೇಕಾಗುತ್ತೆ. ಅಷ್ಟೊಂದು ದುಡ್ಡು ನಮ್ಮಲಿಲ್ಲ.
ತಬಸುಮ ಫತೇಖಾ ವಿಧ್ಯಾರ್ಥಿನಿ
ಬಹುಮುಖ ಪಪ್ರತಿಭೆ ವಿಧ್ಯಾರ್ಥಿನಿ ತಬಸುಮ ತಂದೆ ನಸೀರೋದ್ದಿನ್ ಶಿಕ್ಷಕರ ಮಾರ್ಗದರ್ಶನದಲ್ಲಿ ಮತ್ತು ತನ್ನ ಸ್ವಪ್ರತಿಭೆಯಿಂದ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಶಾಲೆಯ ಇತಿಹಾಸದಲ್ಲಿ ಇದು ದಾಖಲೆಯ ಫಲಿತಾಂಶ. ಬರಿ ಪಠ್ಯ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಇಕೆಯದು ಎತ್ತಿದ ಕೈ ಬqತನದಲ್ಲಿ ಬೆಳೆದರು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡಿದ್ದಾಳೆ. ನಿಜಕ್ಕೂ ನಮ್ಮ ಶಾಲೆ ವಿಧ್ಯಾರ್ಥಿನಿ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ.
ಸಿದ್ದಲಿಂಗ ಬಾಳಿ. ಶಿಕ್ಷಕರು ಸಚ್ಚಿದಾನಂದ ಪ್ರೌಢ ಶಾಲೆ ರಾವೂರ