ಕಟ್ಟಡ ಕಾಮಗಾರಿ ಸ್ಥಳಕ್ಕೆ ಸುಭಾಷಚಂದ್ರ ಸಂಬಾಜಿ ಭೇಟಿ

ರಾಯಚೂರು.ಜು.೧೫- ತಾಲೂಕಿನ ಗೋನವಾರ ಗ್ರಾಮದಲ್ಲಿ ನಡೆಯುತ್ತಿರುವ ಬೀರಲಿಂಗೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿ ಸ್ಥಳಕ್ಕೆ ಆಮ್ ಆದ್ಮಿ ಪಕ್ಷದ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿ ಡಾ. ಸುಭಾಷಚಂದ್ರ ಸಾಂಬಾಜಿ ಅವರು ಇಂದು ಭೇಟಿ ನೀಡಿದರು.
ಪಕ್ಷದ ಕಾರ್ಯಕರ್ತರೊಂದಿಗೆ ಗೋನವಾರ ಗ್ರಾಮಕ್ಕೆ ಭೇಟಿ ನೀಡಿ ಬರದಿಂದ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಡಾ. ಸುಭಾಷಚಂದ್ರ ಅವರು ಮಾತನಾಡಿ ಕುರುಬ ಸಮಾಜದ ಕುಲದೇವರಾದ ಬೀರಲಿಂಗೇಶ್ವರ
ದೇವಸ್ಥಾನ ಕಟ್ಟಡ ಗೋನವಾರ ಗ್ರಾಮದಲ್ಲಿ ನಡೆದಿರುವುದು ಸಂತೋಷದ ವಿಚಾರ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಸಹಾಯ ಮಾಡುತ್ತೇನೆ. ಪ್ರತಿ ಗ್ರಾಮಗಳಲ್ಲಿ ಎಲ್ಲಾ ವರ್ಗದ ಸಮುದಾಯದ ದೇವಸ್ಥಾನಗಳನ್ನು ಕಟ್ಟಿಸಿ ಶಾಂತಿ ನೆಮ್ಮದಿಯಿಂದ ಬದುಕಬೇಕು ಎಂದು ಭಕ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಸತ್ಯನಾರಾಯಣ, ಬಡೇಪ್ಪ ಮಟಮಾರಿ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.