ಕಟ್ಟಡದಿಂದ ಬಿದ್ದು ಸೆಕ್ಯುರಿಟಿ ಗಾರ್ಡ್ ಮೃತ್ಯು


ನಿನ್ನೆ ತಡರಾತ್ರಿ ನಡೆದ ಘಟನೆ

ಮಂಗಳೂರು, ಜ.೨೬- ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಬಳಿಯ ಕಟ್ಟಡವೊಂದರಿಂದ ಆಯತಪ್ಪಿ ಬಿದ್ದು ಸೆಕ್ಯುರಿಟಿ ಗಾರ್ಡ್ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ೧೧.೩೦ರ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಕುತ್ತಾರಿನ ಸತೀಶ್ (೩೮) ಎಂದು ಗುರುತಿಸಲಾಗಿದ್ದು, ಲಿಫ್ಟ್ ಚೆಕ್ ಮಾಡಲು ತೆರಳಿದ್ದ ವೇಳೆ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.