ಕಟೌಟ್, ಬ್ಯಾನರ್ ಹಾಗೂ ಗೋಡೆ ಬರಹ ಹಾಕುವುದನ್ನುನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತರ ಆದೇಶ

ಕಲಬುರಗಿ.ಏ.6:ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ The Karnataka Open places (Prevention Of Disfigurement) Act, 1981 ಹಾಗೂ ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976 ಪ್ರಕರಣ 135ರ ಪ್ರಕಾರ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಅಥವಾ ಇನ್ನಿತರ ಯಾವುದೇ ರೀತಿ ಜಾಹೀರಾತು ಫಲಕ, ಹೋಡಿರ್ಂಗ್ಸ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ತಿಪತ್ರ, ಕಟೌಟ್, ಬ್ಯಾನರ್, ಗೋಡೆ ಬರಹಗಳನ್ನು ಹಾಕುವುದು ಹಾಗೂ ಅಂಟಿಸುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿμÉೀಧಿಸಿ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ದೇವಿದಾಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯಿಂದ ಈಗಾಗಲೇ ಅನುಮತಿ ಪಡೆದಿರುವ ಅಧೀಕೃತ ಸ್ಥಳಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸ್ಥಳದಲ್ಲಿ ಚುನಾವಣೆಗೆ ಸಂಬಂಧಿಸಿದ ಅಥವಾ ಇನ್ನಿತರೇ ಯಾವುದೇ ರೀತಿ ಜಾಹೀರಾತು ಫಲಕ, ಹೋಡಿರ್ಂಗ್ಸ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ತಿಪತ್ರ, ಕಟೌಟ್, ಗೋಡೆಬರಹ, ಬ್ಯಾನರ್‍ಗಳನ್ನು ಹಾಕುವಂತಿಲ್ಲ. ಒಂದು ವೇಳೆ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಿ ನಗರ ಪ್ರದೇಶದ ಯಾವುದೇ ಸ್ಥಳದಲ್ಲಿ (ಅಧಿಕೃತ ಸ್ಥಳ ಬಿಟ್ಟು) ಅನಧೀಕೃತವಾಗಿ ಜಾಹೀರಾತು ಫಲಕ ಹೋಡಿರ್ಂಗ್ಸ್ ಬಂಟಿಂಗ್ಸ್, ಫ್ಲೆಕ್ಸ್, ಭಿತ್ತಿಪತ್ರ, ಗೋಡೆಬರಹ, ಕಟೌಟ್, ಬ್ಯಾನರ್ ಹಾಕಿದ್ದಲ್ಲಿ ಅಂತಹವರ ವಿರುದ್ಧ The Karnataka Open places (Prevention Of Disfigurement) Act, 1981 ರ ಪ್ರಕಾರ ಹಾಗೂ ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.