ಕಟೀಲ್ ಓರ್ವ ನಾಲಾಯಕ್: ಲಕ್ಷ್ಮಣ್

ಮೈಸೂರು,ಏ.16:- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಓರ್ವ ನಾಲಾಯಕ್, ಅಲ್ಲಿನ ಜನ ಸಂಸದರನ್ನಾಗಿ ಮಾಡಿರುವುದು ದುರಂತ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ತಲೆ ಹಿಡುಕರು ಎಂಬ ನಳಿನ್ ಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಭವನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಳಿನ್ ಕುಮಾರ್ ತಲೆ ಹಿಡಿದು ರಾಜ್ಯಾಧ್ಯಕ್ಷರಾಗಿದ್ದಾರೆ. ಅವ್ನು ಒಬ್ಬ ನಾಲಾಯಕ್, ದುರಂತ ಅಲ್ಲಿನ ಜನ ಸಂಸದರನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.
ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಪಕ್ಷವನ್ನು ತಲೆಹಿಡುಕ ಪಕ್ಷ ಎಂದು ಎರಡನೇ ಬಾರಿ ಹೇಳಿಕೆ ನೀಡುತ್ತಿದ್ದಾರೆ. 135 ವರ್ಷದ ಇತಿಹಾಸದ ಪಕ್ಷ, ಜನರಿಗಾಗಿ ತಲೆ ಕೊಟ್ಟಿದ್ದಾರೆ, ಬಲಿದಾನ ನೀಡಿರುವ ಪಕ್ಷ ಕಾಂಗ್ರೆಸ್. ಆದರೆ ನೀವು ಆ ಕೆಲಸ ಮಾಡಿಯೇ ಬಿಜೆಪಿ ಅಧ್ಯಕ್ಷರಾಗಿರೋದು. ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲ ಮಾಡಿ ಬಾಂಬೆ ನಲ್ಲಿ ಶಾಸಕರಿಗೆ ಏನು ಕೊಟ್ಟಿದ್ದೀರಿ. ಅವರೇಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ..? ನಿಮ್ಮ ವೇಷ ಹಾಕುವ ಬಟ್ಟೆ ನೋಡ್ತಿದ್ರೆ ಗೊತ್ತಾಗ್ತಿದೆ. ನಿಮ್ಮ ಭಾಷೆ ನಿಮ್ಮ ಸಂಸ್ಕೃತಿ ತೋರಿಸುತ್ತಿದೆ. ಯಾವ ಆಧಾರದ ಮೇಲೆ ಈ ಹೇಳಿಕೆ ನೀಡುತ್ತಿದ್ದೀರಾ.? ನಿಮ್ಮ ಯೋಗ್ಯತೆಯನ್ನು ಜನರು ನೋಡುತ್ತಿದ್ದೀರಿ. ಸೋಲು ಗೆಲುವು ಇರಬಹುದು ಆದರೆ ಶಾಶ್ವತವಾಗಿ ಬಿಜೆಪಿ ಅಧಿಕಾರದಲ್ಲಿ ಉಳಿಯೋಕೆ ಆಗಲ್ಲ ಎಂದರು.
ನಿಮ್ಮದೇ ಸರ್ಕಾರಕ್ಕೆ ರಂಧ್ರ ಕೊರೆಯುತ್ತಿರುವವರು ಯಾರು ನಿಮ್ಮ ಸರ್ಕಾರದಲ್ಲಿ ಒಂದು ಹೆಣ್ಣು ಮಗುವಿಗೆ ನ್ಯಾಯ ಕೊಡಿಸಲು ಆಗಲಿಲ್ಲ. ಪಿಪಿಇ ಕಿಟ್ ಹಾಕಿಸಿ ಮಲಗಿಸಿ ಶಾಸಕನನ್ನು ರಕ್ಷಿಸುತ್ತೀರಿ. ಅಧ್ಯಕ್ಷ ಸ್ಥಾನಕ್ಕೆ ನೀನೊಬ್ಬ ನಾಲಾಯಕ್. 107 ಬಿಜೆಪಿ ಸಂಸದರ ಮೇಲೆ ಹೆಣ್ಣು ಮಕ್ಕಳ ಆರೋಪದ ಕೇಸ್ ಗಳಿದೆ. ಇದರಿಂದ ರಾಜ್ಯಕ್ಕೆ ಮಾನಮರ್ಯಾದೆ ಹೋಗ್ತಿದೆ. ಬಿಜೆಪಿ ಹೈಕಮಾಂಡ್ ಇಂತದ್ದನ್ನ ಗಮನಿಸಬೇಕು ಎಂದು ಆಗ್ರಹಿಸಿದರು.