ಕಟೀಲರ ವಿಷಕಾರಿ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್ ಆಕ್ರೋಷ

ಕಲಬುರಗಿ,ಏ.4- ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ್ಠ ನಾಯಕರಾದ ಡಾ.ಮಲ್ಲ್ಲಿಕಾರ್ಜುನ ಖರ್ಗೆ ಅವರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ವಿಷಕಾರಿ ಎಂಬ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಬಲವಾಗಿ ಖಂಡಿಸಿದೆ.
ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಏನೂ ಗೊತ್ತಿದೆ ಅವರ ಕುರಿತು ವಿಷಕಾರಿಯಾಗಿದ್ದರೆ ಎಂಬ ಹೇಳಿಕೆ ನೀಡುವ ಮೂಲಕ ತಮ್ಮ ವಿಕೃತ ಮಾನಸಿಕತೆಯನ್ನು ತೋರಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಪ್ರತಿಕ್ರಿಯಿಸಿದ್ದಾರೆ.
ಡಾ.ಖರ್ಗೆ ಅವರ ಪ್ರಭಾವ ಮತ್ತು ಜನರಲ್ಲಿರುವ ಪ್ರೀತಿಯಿಂದಾಗಿ ಈ ಭಾಗದಲ್ಲಿ ಸತತವಾಗಿ 11 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದೇ ಸಾಕ್ಷಿ. ಇಲ್ಲಿನ ಇಎಸ್‍ಐ ಆಸ್ಪತ್ರೆ, ಕೇಂದ್ರಿಯ ವಿಶ್ವವಿದ್ಯಾಲಯ, ಕಲಂ 371 (ಜೆ) ತಿದ್ದುಪಡಿ, ವಿಮಾನ ನಿಲ್ದಾಣ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ಪೊಲೀಸ್ ತರಬೇತಿ ಕೇಂದ್ರ, ಜಿಲ್ಲಾಧಿಕಾರಿಗಳ ಕಚೇರಿ ಮೇಲಾಗಿ ರೈಲ್ವೆ ಸಚಿವರಾಗಿರುವ ಸಂದರ್ಭದಲ್ಲಿ ಜಿಲ್ಲೆಯಿಂದ ರಾಜ್ಯ ಕೇಂದ್ರ ಸ್ಥಾನಕ್ಕೆ ಬೀದರ-ಯಶವಂತಪೂರ, ಕಲಬುರಗಿ ಮಾರ್ಗವಾಗಿ ಸೋಲಾಪೂರ-ಯಶವಂತಪೂರ, ಸಿಕಿಂದ್ರಾಬಾದ-ಹುಬ್ಬಳ್ಳಿ ಮತ್ತು ಅನೇಕ ಹೊಸ ಹೊಸ ರೈಲುಗಳ ಓಡಾಟ ಹಾಗೂ ಕಲಬುರಗಿ ಹಾಗೂ ಇತರೆ ಭಾಗದ ರೈಲ್ವೆ ನಿಲ್ದಾಣಗಳ ನವೀಕರಣ, ಯಾದಗಿರಿ ಜಿಲ್ಲೆಯ ಕಡೇಚೂರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಮತ್ತು ಬೆಂಗಳೂರಿನಿಂದ ವಾರಣಾಸಿಗೆ ರೈಲ್ವೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ಆಗಿರುವುದು ಅವರಿಂದ ಎಂಬುವುದು ಜನರಿಗೆ ಗೊತ್ತಿರುವ ವಿಷಯವಾಗಿದೆ ಆದರೆ ಕಟೀಲರಿಗೆ ಇದೆಲ್ಲ ತಿಳಿದಿಲ್ಲ ಎಂದು ಜಗದೇವ ಗುತ್ತೇದಾರ ಕಿಡಿಖಾರಿದ್ದಾರೆ.
ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಯುಪಿಎ ಸರಕಾರ ಮತ್ತು ಕಾಂಗ್ರೆಸ್ ಸರಕಾರದಲ್ಲಿ ಈ ಭಾಗಕ್ಕೆ ಮಂಜೂರಿ ಮಾಡಿಸಿದಂತಹ ಅನೇಕ ಯೋಜನೆಗಳು ಮತ್ತು ಕಚೇರಿಗಳು ಈಗ ಬಿಜೆಪಿ ಸರಕಾರ ರದ್ದುಗೊಳಿಸುವದು, ಬೇರೆ ಕಡೆ ಸ್ಥಳಾಂತಗೊಳಿಸುವ ಮೂಲಕ ಬಿಜೆಪಿ ಸರಕಾರ ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದಲ್ಲದೇ ಮಲತಾಯಿ ಧೋರಣೆ ಅನುಸರಿಸುವ ಮೂಲಕ ನಮ್ಮ ಈ ಭಾಗಕ್ಕೆ ವಿಷಕಾರಿ ಕೆಲಸವನ್ನು ಮಾಡಿ ತೋರಿಸಿದೆ ಎಂದು ನಳೀನಕುಮಾರ ಕಟೀಲರಿಗೆ ಸವಾಲು ಹಾಕಿದರು.
ಉನ್ನತ ಸ್ಥಾನದಲ್ಲಿರುವ ಹಾಗೂ ಅನುಭವಿ ಹಿರಿಯ ರಾಜಕಾರಣಿ ಕುರಿತು ಮಾಹಿತಿ ಮತ್ತು ವ್ಯಕ್ತಿತ್ವವನ್ನು ತಿಳಿಯದೇ ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವ ಬಿಜೆಪಿ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲು ಅವರಿಗೆ ರಾಜಕೀಯ ಅನುಭವದ ಕೋರತೆ ಎದ್ದು ಕಾಣುತ್ತದೆ.
ರಾಜಕೀಯ ಅನುಭವ ವಿಲ್ಲದ ಹಾಗೂ ಮನಸ್ಸಿಗೆ ಬಂದಂತೆ ಮಾತನಾಡುವವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿರುವುದು ದುರದೃಷ್ಟಕರ.
ಈ ಭಾಗದಲ್ಲಿ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಡಾ.ಖರ್ಗೆ ಅವರು ವಿಷಕಾರಿ ಎಂದಾದರೆ ಅವರು ಕೈಗೊಂಡಿರುವ ಇಲ್ಲಿನ ಅಭಿವೃದ್ದಿ ಕೆಲಸಗಳನ್ನು ಕಣ್ಣು ತೆರೆದು ನಳೀನಕುಮಾರ ಕಟೀಲು ನೋಡಲಿ ಅದು ಬಿಟ್ಟು ವಿಷಕಾರು ಹೇಳಿಕೆ ನಿಡುತ್ತಿರುವುದಕ್ಕೆ ಇಲ್ಲಿನ ಜನ ತಕ್ಕ ಪಾಠ ಕಲಿಸಲಿದ್ದಾರೆ.
ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಹೆಳಿಕೆ ನೀಡಿದ ನಳೀನಕುಮಾರ ಕಟೀಲು ಇವರು ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ, ಕಟೀಲರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಲಿ ಎಂದು ಗುತ್ತೇದಾರ ಅವರು ಒತ್ತಾಯಿಸಿದ್ದಾರೆ.