ಕಟಿಂಗ್ ಮಷೀನ್ ಮುಖಾಂತರ ತೊಗರಿ ಕಟಾವಿಗೆ ಮುಂದಾದ ರೈತ

ಸೇಡಂ,ಡಿ,25: ತಾಲೂಕಿನಾದ್ಯಂತ ಈ ಬಾರಿ ಅತಿವೃಷ್ಟಿ ಅನಾವೃಷ್ಟಿಯಿಂದ ಕಂಗಾಲಾದ ರೈತರು ಅಲ್ಪಸ್ವಲ್ಪ ಬೆಳೆದಿರುವಂತಹ ತೊಗರಿಯು ಬಟಗೇರಾ ಬಿ, ಹೂಡಾ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ತೊಗರಿ ಕಟಾವಿಗೆ ಬಂದಿದ್ದು ಕಟಿಂಗ್ ಮಷೀನ್ ಮುಖಾಂತರ ತೊಗರಿ ಕಟಾವಿಗೆ ಹಳ್ಳಿಯ ರೈತರು ಮುಂದಾಗಿದ್ದು ಕಂಡು ಬಂದ ದೃಶ್ಯ. ಎಕರೆಗೆ ಎಷ್ಟು ಇಳುವರಿ ಬರುತ್ತದೆ ಎಂಬುದು ಕಾದು ನೋಡಬೇಕಾಗಿದೆ. ಈ ಬಾರಿ ಅತಿ ಹೆಚ್ಚು ಮಳೆಯಿಂದ ಹೆಸರು ಉದ್ದು ತೊಗರಿ ಹಾನಿಯಾಗಿದ್ದು ತೊಗರಿ ಅತಿ ಕಡಿಮೆ ಇಳುವರಿ ಬರಬಹುದು. ತೊಗರಿ ಕಟಾವಿಗೆ ಕಟಿಂಗ್ ಮಷೀನ್ ಪ್ರಾರಂಭಿಸಿದ ರೈತನ ಅಭಿಪ್ರಾಯ.