ಕಟಾವು ಹಂತದಲ್ಲಿದ್ದ ಭತ್ತದ ಬೆಳೆ ಮಳೆಯಿಂದ ನಾಶ

ಗುರುಮಠಕಲ್: ಎ.26: ರೈತರು ತಮ್ಮ ಹೊಲದಲ್ಲಿ ಬೆಳೆದ ಭತ್ತ ಸಂಪೂರ್ಣವಾಗಿ ಈಗ ಕಟಾವು ಹಂತದಲ್ಲಿದ್ದು ರಾತ್ರಿ ಸುರಿದ ಮಳೆ ಯಿಂದ ಸಂಪೂರ್ಣವಾಗಿ ಮಳೆನೀರಿನಿಂದ ಕಟಾವಾದ ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ.
ರೈತರು ಕಷ್ಟ ಪಟ್ಟು ದುಡಿದು ನಾಟುಹಾಕಿ. ಸದೆ ತೆಗೆದು. ಗೊಬ್ಬರಹಾಕಿ ಇತರ ಬೆಳೆ ಕಟಾವು ಹಂತ್ತದಲ್ಲಿದ್ದಾಗ ಮಳೆ ಬಂದರೆ ರೈತರ ಪಾಡೇನು ಇದರಿಂದ ನಾವು ಮತ್ತೆ ಸಾಲಮಾಡಿ ಕೊಂಡು ತೀರಿಸಲಾಗದೆ ಪಟ್ಟಣಗಳಿಗೆ ಗುಳೆ ಹೋಗುವುದು ಬರುತ್ತದೆ ಎಂದು ಚಂಡ್ರಿಕಿ ಗ್ರಾಮದ ರೈತ ಸಹೋದರರು ತಿಳಿಸಿದರು.