
ಗುರುಮಠಕಲ್:ಮಾ.19:ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಮತ್ತು ಗ್ರಾಮಗಳಲ್ಲಿ ಅಗತ್ಯ ಇರುವ ಮೂಲಭೂತ ಸೌಕರ್ಯಗಳು ಪಡೆದುಕೊಳ್ಳಲು ನೀವು ಕಛೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ನಿಮಗೆ ಈ ಕಾರ್ಯಕ್ರಮ ಒಂದು ಒಳ್ಳೆಯ ಅವಕಾಶ ಎಂದು ತಹಸೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಗುರುಮಠಕಲ್ ಶ್ರೀ ಮಹಮ್ಮದ್ ಮೋಸಿನ್ ಅಹ್ಮದ್ ಅವರು ತಿಳಿಸಿದರು. ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿ ನಡೆ ಹಳ್ಳಿಯಕಡೆ ಕಾರ್ಯಕ್ರಮದ ಅಂಗವಾಗಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು. ಪಶುಸಂಗೋಪನೆ. ಕೃಷಿಗೆ ಸಂಬಂಧಿಸಿದ ವಿಷಯಗಳು. ಪಿಂಚಣಿ ಪತ್ರಗಳಬಗ್ಗೆ ಬಂದಿರುವ ಸಾರ್ವಜನಿಕರು ತಮ್ಮ ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು ಲಿಖಿತ ರೂಪದಲ್ಲಿ ಬರೆದು ಕೊಟ್ಟು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಸಂಬಂಧ ಪಟ್ಟ ತಾಲೂಕು ಅಧಿಕಾರಿಗಳು ಇಲ್ಲಿ ಬಂದಿದ್ದಾರೆ ನಿಮ್ಮ ನಿಮ್ಮ ಸಮಸ್ಯೆಗಳು ಬಗೆಹರಿಸಿಕೊಳ್ಳಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ನಿಮಗೆ ಬಿಡುವಾದಾಗ ಬಂದುಬೆಟ್ಟಿ ಯಾದರೆ ಸಾಧ್ಯವಾದಷ್ಟು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.ಈ ಸಮಯದಲ್ಲಿ ಸಾರ್ವಜನಿಕರು ಶುದ್ದವಾದ ನೀರನ್ನು ಕುಡಿಯಬೇಕು ಮತ್ತು ನಿಮ್ಮ ಸುತ್ತ ಮುತ್ತಲು ಸ್ವಚ್ಚತೆಯ ಬಗ್ಗೆ ಕಾಳಜಿಯನ್ನು ವಹಿಸಬೇಕು ಇವೆಲ್ಲ ಸಮಸ್ಯೆಗಳು ನಮ್ಮಲ್ಲಿ ಬೇಗ ಪರಿಹಾರ ವಾಗಬೇಕಾದರೆ ಮೊದಲು ಶಿಕ್ಷಣದಿಂದ ಯಾರು ವಂಚಿತರಾಗದೆ ಎಲ್ಲಾರು ತಮ್ಮ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಯಾಕೆಂದರೆ ನಾವು ಜಾಗರೂಕರಾಗಿರಬೇಕಾದರೆ ಶಿಕ್ಷಣವು ಬಹಳಷ್ಟು ಮುಖ್ಯ ಎಂದು ಹೇಳಿದರು. ಮುಖ್ಯವಾಗಿ ಚುನಾವಣೆ ಹತ್ತಿರ ಬರುತ್ತಿದೆ ಹದಿನೆಂಟು ವರ್ಷ ಮೇಲ್ಪಟ್ಟ ವರು ಯಾರು ಕೂಡ ಮತದಾನದಿಂದ ವಂಚಿತ ರಾಗಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಹತ್ತನೇಯ ತರಗತಿಯಲ್ಲಿ 97% ಪ್ರತಿಶತ ಪಡೆದ ಶ್ರೀ ಕಾಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ರಾಮಚಂದ್ರ ಬಸುದೆ ಯವರು ಮಾತನಾಡುತ್ತ ಈ ಭಾಗದ ಬಡ ಜನರು ವಲಸೆ ಹೋಗ ಬಾರದು ಎಂದು ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ. ಹಾಗೂ ಸರ್ಕಾರದ ನಿಯಮದ ಪ್ರಕಾರ ನಿಮ್ಮ ಸ್ವಂತ ಹೊಲದಲ್ಲಿ ಕೆಲಸ ಮಾಡಿಕೊಳ್ಳಬಹುದು ಎಂದು ಜನರಿಗೆ ಇಲಾಖೆ ಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಸಾಯಿಬಾಪ್ಪ ಕಡೆಚೂರು ಮಾತನಾಡಿ ಕುರಿಗೆ ಸೈಕಲ್. ಬಟ್ಟೆ ಪೈಪು. ರೂಟುವೇಟರ್ ಇನ್ನೂ ಅನೇಕ ಸೌಲಭ್ಯಗಳು ರೈತರಿಗೆ ಸಿಗುತ್ತವೆ ನಿವು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಹಾಗೂ ಸೌಲಭ್ಯಗಳನ್ನು ಪಡೆಯಲು ರೈತಸಂರ್ಪಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದರು. ಗ್ರೇಡ್-2 ತಹಸಿಲ್ದಾರ್ ನರಸಿಂಹ ಸ್ವಾಮಿ ಯವರು ಮಾತನಾಡುತ್ತ ಕಂದಾಯ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಮತಿ ಸಂಗೀತ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾದ ಬಸವರಾಜ ಕಾಣೆಕಲ್. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಮತಿ ಶೋಭಾ ಪಾಟೀಲ್. ಗ್ರಾಮ ಆಡಳಿತ ಅಧಿಕಾರಿ ಶರಣಪ್ಪ. ಗುರುಮಠಕಲ್ ಉಪ ತಹಶೀಲ್ದಾರರು ಏಜಾಜ್ ಉಲ್ ಹಕ್. ಕೊಂಕಲ ಉಪ ತಹಶೀಲ್ದಾರರು ಬಸವರಾಜ ಸಜ್ಜನ್. ಕೊಂಕಲ್ ಕಂದಾಯ ನಿರೀಕ್ಷಕರು ಭೀಮಸೇನರಾವ್ ಕುಲಕರ್ಣಿ. ಕಂದಕೂರ ಪಶುವೈದ್ಯಾಧಿಕಾರಿ ಡಾಕ್ಟರ್ ಓಂಪ್ರಕಾಶ್. ಸಹಾಯಕ ತೋಟಗಾರಿಕೆ ಅಧಿಕಾರಿ ಬೀರಲಿಂಗ ಪೂಜಾರಿ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಾವುದ್.ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದರು ಕಾರ್ಯಕ್ರಮದಲ್ಲಿ ನಾಡಗೀತೆಯನ್ನು ಲಕ್ಷ್ಮೀ ಸಂಗಡಿಗರು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸರ್ಕಾರಿ ಪ್ರೌಢಶಾಲೆ ಎಲ್ಹೇರಿ ಬಿರಾದಾರ ಹಣಮಂತ ನೀಡಿದರು. ಪೆÇೀಲಿಸ್ ಸಿಬ್ಬಂದಿಯವರು ಇದ್ದರು.