ಕಚ್ಚಾ ತೈಲ ದರ ಇಳಿದರೆಷ್ಟೇ ಪೆಟ್ರೋಲ್, ಡೀಸೆಲ್ ದರ ಕಡಿಮೆ

ನವದೆಹಲಿ, ನ.28-ಆಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದರೆ ಮಾತ್ರ ಡೀಸೆಲ್ ಮತ್ತು ಪೆಟ್ರೋಲ್ ದರ ಇಳಿಕೆಯಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶುಕ್ರವಾರ ಏಷ್ಯಾದಲ್ಲಿ ಬ್ರೆಂಟ್ ಕಚ್ಚಾ ತೈಲದ ದರ ಪ್ರತಿ ಬ್ಯಾರಲ್ ಗೆ ನಾಲ್ಕು ಡಾಲರ್ ಗಳಷ್ಟು ಇಳಿಕೆಯಾಗಿತ್ತು. ಇದರಿಂದಾಗಿ ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗಲಿದೆ‌ ಎಂದು ನಿರೀಕ್ಷಿಸಲಾಗಿತ್ತು.
ನವೆಂಬರ್ 25 ರವರೆಗೆ ಕಚ್ಚಾ ತೈಲದ ದರ 80 ರಿಂದ 82 ಡಾಲರ್ ಗಳಷ್ಟಿತ್ತು.
ದಕ್ಷಿಣಾ ಆಫ್ರಿಕಾದಲ್ಲಿ ಹೊಸ ಕೊರೊನಾ ತಳಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತಗೊಳಿಸುತ್ತದೆ ಹಾಗೂ ತೈಲ ಬೇಡಿಕೆ‌ ಕುಸಿಯುವಂತೆ ಮಾಡಲಿದೆ ಎಂಬ ಆತಂಕದಿಂದ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿರುವಂತೆ ಕಾಣುತ್ತಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಹಿಂದಿನ 15 ದಿನಗಳ ಅಂತರರಾಷ್ಟ್ರೀಯ ಇಂಧನ ದರದ ಸರಾಸರಿಯನ್ನು ಆಧರಿಸಿ ಇಂಧನ ದರ ಪರಿಷ್ಕರಣೆ ಮಾಡುತ್ತವೆ. ಆದರೆ ಪೆಟ್ರೋಲ್ ಡೀಸೆಲ್ ದರ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.