ಕಚ್ಚಾತೈಲ ಇಳಿಕೆ ಇಂಧನ ದರ ಕಡಿತ ನಿರೀಕ್ಷೆ

ನವದೆಹಲಿ,ಜು.೧೭- ದೇಶದಲ್ಲಿ ಕಚ್ಚಾ ಬೆಲೆ ಪ್ರತಿಬ್ಯಾರಲ್‌ಗೆ ೧೦೦ ಡಾಲರ್ ಗಿಂತ ಕಡಿಮೆಯಾಗಿದೆ. ಆದರೆ ಇಂಧನ ಬೆಲೆ ಕಡಿತ ಮಾಡುವ ಸಾದ್ಯತೆ ಅಸಂಭವವಾಗಿದೆ.
ದೇಶದಲ್ಲಿ ಏಪ್ರಿಲ್ ತಿಂಗಳ ಬಳಿಕ ಇದೇ ಮೊದಲ ಭಾರತದ ಕಚ್ಚಾ ಬೆಲೆ ವಾರದ ಬೆಂಚ್ ಮಾರ್ಕ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ ೧೦೦ ಡಾಲರ್ ಗಿಂತ ಕಡಿಮೆಯಾಗಿದೆ.
ರೂಪಾಯಿ ಮೌಲ್ಯದ ದಾಖಲೆ ಕುಸಿತ ಮತ್ತು ಪಂಪ್ ದರಗಳಲ್ಲಿನ ಫ್ರೀಜ್ ಹಾಗೂ ಚಿಲ್ಲರೆ ಮಾರಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂಧನ ಬೆಲೆಗಳಲ್ಲಿ ತಕ್ಷಣದ ಕಡಿತ ಅಸಂಭವವಾಗಿದೆ.
ಭಾರತೀಯ ಸಂಸ್ಕರಣಾಗಾರರಿಂದ ಖರೀದಿಸಿದ ಕಚ್ಚಾ ತೈಲದ ಬೆಲೆ ಜುಲೈ ೧೪ ರಂದು ಪ್ರತಿ ಬ್ಯಾರೆಲ್‌ಗೆ ೯೯.೭೬ ಡಾಲರ್ ಕ್ಕೆ ಕುಸಿದಿದೆ.
ಜಾಗತಿಕ ಬೆಲೆಗಳು ವಾರದಲ್ಲಿ ಶೇ.೫.೫ ರಷ್ಟು ಕುಸಿದಿದ್ದರಿಂದ ಪ್ರತಿ ಬ್ಯಾರಲ್ ಬೆಲೆ ಕುಸಿತ ಕಂಡಿದೆ.
ಉಕ್ರೇನ್- ರಷ್ಯಾ ಸಂಘರ್ಷ ಭುಗಿಲೆದ್ದ ಕಾರಣ ಇದು ಈ ವರ್ಷ ಫೆಬ್ರವರಿ ೨೪ ರಂದು ಪ್ರತಿ ಬ್ಯಾರಲ್ ಬೆಲೆ ೧೦೦ ಡಾಲರ್ ಗಡಿ ದಾಟಿತ್ತು. ಇದೀಗ ಕಚ್ಚಾತೈಲದ ಬೆಲೆ ಕುಸಿತ ಕಂಡಿದೆ.ಆದರೆ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿತ ಕಂಡಿದೆ.
ತೈಲ ಬೆಲೆಗಳು ತೈಲ ಆಮದುಗಾಗಿ ಡಾಲರ್ ಬೇಡಿಕೆ ಕಡಿಮೆ ಮಾಡುತ್ತದೆ. ರಿಫೈನರ್‌ಗಳಿಂದ ಡಾಲರ್ ಬೇಡಿಕೆಯಲ್ಲಿ ಶೇ ೪೫ ರಷ್ಟು ಹೆಚ್ಚಳವಾಗಿದೆ. ಜುಲೈ ೮ ಕ್ಕೆ ಕೊನೆಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ೮ ಶತಕೋಟಿ ಡಾಲರ್‌ಗಳಷ್ಟು ಕುಸಿಯಲು ಪ್ರಮುಖ ಕಾರಣವಾಗಿದೆ.
ಕಚ್ಚಾ ಬೆಲೆಯಲ್ಲಿನ ಇಳಿಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ನಷ್ಟವನ್ನು ಕಡಿಮೆ ಮಾಡಲು ಸಾಕಾಗುವುದಿಲ್ಲ, ದಲ್ಲಾಳಿಗಳು ಪ್ರತಿ ಲೀಟರ್‌ಗೆ ರೂ ೧೨-೧೫ ಎಂದು ನಿಗದಿಪಡಿಸಿದ್ದಾರೆ. ಏರುತ್ತಿರುವ ಕಚ್ಚಾ ಮತ್ತು ರೂಪಾಯಿಯ ಕುಸಿತದ ನಡುವೆ ಪಂಪ್ ಬೆಲೆಗಳು ಫ್ರೀಜ್ ಆಗಿದ್ದವು- ಬೆಲೆಯಲ್ಲಿ ಎರಡೂ ಪ್ರಮುಖ ಅಂಶಗಳಾಗಿವೆ. ರೂಪಾಯಿಯ ದಾಖಲೆಯ ಕುಸಿತ ಕಚ್ಚಾ ತೈಲದ ಕುಸಿತದಿಂದ ಹೆಚ್ಚಿನ ಪರಿಹಾರ ಸರಿದೂಗಿಸಿದೆ.