ಕಚೇರಿ ಕೆಲಸಗಳು ಯಶಸ್ವಿಯಾಗಿ ನಡೆಯಲು ಸಮಷ್ಠಿಭಾವ ಅಗತ್ಯ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಜು.4: ಸಮಷ್ಠಿಭಾವದಿಂದ ಒಗ್ಗೂಡಿ ಕೆಲಸ ನಿರ್ವಹಿಸಿದಾಗ ಕಚೇರಿ ಕೆಲಸಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ  ನಿವೃತ್ತ ದ್ವಿತೀಯ ದರ್ಜೆ ಸಹಾಯಕಿ ಎಸ್.ಆರ್.ವನಜಾಕ್ಷಮ್ಮ ಅವರಿಗೆ ಆಯೋಜಿಸಿದ್ದ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಗೌರವ ದೊರೆಯುತ್ತದೆ ಎಂದರು. ಕಚೇರಿಯಲ್ಲಿ ಕೆಲಸಗಳು ಯಶಸ್ವಿಯಾಗಲು ಸಂಘಟಿತ ಪ್ರಜ್ಞೆ, ಸಮನ್ವಯಭಾವ ಮುಖ್ಯವಾದುದು. ವನಜಾಕ್ಷಮ್ಮನವರು ಎಲ್ಲ ಸಹೊದ್ಯೋಗಿಗಳ ಜೊತೆ ಆತ್ಮೀಯ ಸಂಬAಧವನ್ನು ಹೊಂದಿದ್ದು ಅಂತ:ಕರಣ ಭಾವದಿಂದ ಮಾತೃ ಪ್ರೀತಿಯನ್ನು ನೀಡಿದ್ದರು. ತಮಗೆ ವಹಿಸಿದ ಟಪಾಲು ವಿಭಾಗದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಶ್ಲಾಘಿಸಿದರು.ಹಿರಿಯ ಉಪನ್ಯಾಸಕರಾಧ ಸಿ.ಎಸ್.ವೆಂಕಟೇಶಪ್ಪ, ಈ.ಹಾಲಮೂರ್ತಿ, ಎಸ್.ಸಿ.ಪ್ರಸಾದ್, ಮಹಮದ್ ಅಯೂಬ್ ಸೊರಬ್, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಬಿ.ಎಸ್.ನಿತ್ಯಾನಂದ, ವಿ.ಕನಕಮ್ಮ, ಕೆ.ಜಿ.ಪ್ರಶಾಂತ್, ಯು.ಸಿದ್ದೇಶಿ, ಸಿ.ಎಸ್.ಲೀಲಾವತಿ, ಎನ್.ರಾಘವೇಂದ್ರ, ಎನ್.ಮಂಜುನಾಥ್, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್, ಕಚೇರಿ ಅಧೀಕ್ಷಕರಾದ ದೇವೇಂದ್ರಪ್ಪ, ಗೀತಾ, ಕವಿತಾ, ಸಹಾಯಕ ಸಾಂಖಿಕ ಅಧಿಕಾರಿ ರೂಪಾ, ಪ್ರಥಮ ದರ್ಜೆ ಸಹಾಯಕರಾದ ಮಹೇಂದ್ರ, ಮಂಜುನಾಥ್, ದ್ವಿತೀಯ ದರ್ಜೆ ಸಹಾಯಕರಾದ ಸೌಭಾಗ್ಯಮ್ಮ, ನಿರ್ಮಲ ಮತ್ತಿತರರಿದ್ದರು.