ಕಚೇರಿ ಉದ್ಘಾಟನೆ

ಧಾರವಾಡ, ಜ.22: ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹೆಹೊಸದಾಗಿ ಸ್ಥಾಪನೆಗೊಂಡ ಕಾನೂನು ಅಭಿರಕ್ಷಕರ ಕಚೇರಿಯ ಉದ್ಘಾಟನೆಯನ್ನು ಆನ್‍ಲೈನ್ ಮುಖಾಂತರ ನೆರವೇರಿಸಿದರು.

ತದನಂತರ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎಡಿಆರ್ ಕಟ್ಟಡದಲ್ಲಿ ಸ್ಥಾಪನೆಗೊಂಡ ಎಲ್‍ಎಡಿಸಿಎಸ್ ಕಚೇರಿಯ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಕೆ .ಜಿ .ಶಾಂತಿ ಅವರು ರಿಬ್ಬನ್ ಕತ್ತರಿಸುವ ಮುಖಾಂತರ ಕಚೇರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸದಸ್ಯ ಕಾರ್ಯದರ್ಶಿಗಳು, ಹಾಗೂ ನಗರದ ಎಲ್ಲ ನ್ಯಾಯಾಧೀಶರುಗಳು ಮತ್ತು ವಕೀಲರ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.