ಕಚೇರಿಯಲ್ಲಿ ಕಸಗುಡಿಸಿ ಜನತೆಗೆ ಸ್ವಚ್ಛತೆ ಅರಿವು ಮೂಡಿಸಿದ ಶಾಸಕ ಡಾ ಶ್ರೀನಿವಾಸ.

ಕೂಡ್ಲಿಗಿ. ಆ 25 :- ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಇಂದು ಬೆಳಿಗ್ಗೆ ಉಪ ಖಜಾನೆ ಕಚೇರಿ ಉದ್ಘಾಟನೆ ನೆರವೇರಿಸಲು ಬಂದಿದ್ದ  ಶಾಸಕ ಡಾ ಶ್ರೀನಿವಾಸ ಎನ್ ಟಿ. ಕಚೇರಿ ಆವರಣದಲ್ಲಿ ಕಚೇರಿಗೆ ಬಂದ ಜನರು  ಬಿಸಾಡಿದ ಗುಟ್ಕಾ ಚೀಟಿ ಹಾಗೂ ಕಸವನ್ನು ಕಂಡು ತಾವೇ ಪೊರಕೆ ಹಿಡಿದು ಕಸಗುಡಿಸಿ ಸ್ವಚ್ಛತೆ ಅರಿವು ಮೂಡಿಸಿದ ಘಟನೆ ಜರುಗಿತು.

ಪಟ್ಟಣದ ಬಳ್ಳಾರಿ ರಸ್ತೆಯಲ್ಲಿದ್ದ ಉಪ ಖಜಾನೆ  ಇಲಾಖೆಯು ನೂತನ ತಾಲೂಕು ಆಡಳಿತ ಸೌಧಕ್ಕೆ ವರ್ಗಾಯಿಸುವ  ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಕಛೇರಿ ಆವರಣದಲ್ಲಿ ಕಂಡುಬಂದ ಗುಟ್ಕಾ ಚೀಟಿಗಳು, ಪೇಪರ್ ಬಿದ್ದ ಹಾಗೂ ಗುಟ್ಕಾ ಉಗುಳಿ ಕಟ್ಟಡದ ಕಳೆಯನ್ನೇ ಬದಲಾಯಿಸಿರುವ ಕೆಂಪು ಬಣ್ಣದ ಗೋಡೆ ಕಂಡು ಅಲ್ಲಿದ್ದ ಜನತೆಗೆ ಅರಿವು ಮೂಡಿಸಲು ಮುಂದಾಗಿ ತಕ್ಷಣ ಪೊರಕೆ ಹಿಡಿದು ಕಚೇರಿ ಆವರಣದಲ್ಲಿ ಕಸಗುಡಿಸಲು ಮುಂದಾದನ್ನು ಕಂಡು ಅಲ್ಲಿನ ಅಧಿಕಾರಿಗಳೇ ಅಚ್ಚರಿಯಾದರೂ ಮತ್ತು ಜನತೆ ಕುರಿತು ಮಾತನಾಡಿದ ಶಾಸಕರು ಸಾರ್ವಜನಿಕ ಕಚೇರಿಗಳು ನಮ್ಮ ಮನೆಗಳಿದ್ದ ಹಾಗೇ ಇಲ್ಲಿ ಬಂದು ಹೋಗುವ ನಾವೆಲ್ಲರೂ ಸ್ವಚ್ಛತೆ ಕಾಪಾಡಬೇಕಿದೆ ಅದನ್ನು ಬಿಟ್ಟು ಗುಟ್ಕಾ ದಂತಹ ತಂಬಾಕು ತಿನ್ನುವ ದುಶ್ಚಟದ ಜೊತೆಗೆ ಕಚೇರಿಯ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕಿ ಉಗುಳುವ ಪರಿಪಾಠ ಸರಿಯಲ್ಲದ್ದು ಎಂದು ಕಸಗುಡಿಸಿ ಸ್ವಚ್ಛತೆಯ ಅರಿವನ್ನು ಜನತೆಗೆ ತಿಳಿಸಿದರು. 

ಈ ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್ ಇಓ ವೈ ರವಿಕುಮಾರ್, ಉಪಖಜಾನೆ ಅಧಿಕಾರಿ ಪ್ರಭುದೇವ, ಪಿಎಸ್ಐ ಧನುಂಜಯ, ಮುಖ್ಯಾಧಿಕಾರಿ ಫಿರೋಜ್ ಖಾನ್,

ಬಣವಿಕಲ್ಲು ಯರಿಸ್ವಾಮಿ, ರಾಮದುರ್ಗ ಮಾಬು, ಶಾಸಕರ ಆಪ್ತ ಸಹಾಯಕ ಮರಳುಸಿದ್ದಪ್ಪ, ನರಸಿಂಹಗಿರಿ ಓಬಣ್ಣ, ವೀರಣ್ಣ, ಕಡ್ಡಿ ಮಂಜುನಾಥ, ಕಾಂಗ್ರೆಸ್ ವಕ್ತಾರಾ ಜಿಲಾನ್ ಹಾಗೂ  ಇತರರಿದ್ದರು.