ಕಗ್ಗಂಟಾದ ಸಿಂಧನೂರು ಕಾಂಗ್ರೆಸ ಟಿಕೇಟ್ ದಿನಾಲು ಹಂಪನಗೌಡ. ಬಸನಗೌಡ ಚರ್ಚೆ ಚಿಂತೆ

ಚಿದಾನಂದ ದೊರೆ
ಸಿಂಧನೂರು. ಏ೧೧ ತಾಲ್ಲೂಕಿನ ಕಾಂಗ್ರೆಸ ಪಕ್ಷದ ಟಿಕೇಟ ಹಂಪನಗೌಡರಿಗಾ ಇಲ್ಲ ಬಸನಗೌಡರಿಗಾ ಎಂದು ಕ್ಷೇತ್ರದ್ಯಾಂತ ಜನ ತಮ್ಮ ಮನೆ ಮಠ ಬಾಳ್ವಿ ಬಗ್ಗೆ ಮಾತನಾಡದೆ ಕುಂತಲ್ಲಿ ನಿಂತಲ್ಲಿ ಇವರಿಬ್ಬರದೆ ಚರ್ಚೆ ಮಾಡುತ್ತು ಚಿಂತೆ ಮಾಡಿ ತಲೆ ಕೆಡಿಸಿಕೊಳ್ಳುತ್ತಿರುವದು ಕಂಡುಬಂದಿದೆ.
ಕಾಂಗ್ರೆಸ ಪಕ್ಷದ ಟಿಕೇಟ ಬಗ್ಗೆ ಪತ್ರಿಕೆಯಲ್ಲಿ ಈ ಹಿಂದೆ ವರದಿ ಮಾಡಿದ್ದು ಸತ್ಯ ಆದರೆ ಅದು ಅಂದಿನ ಸಂದರ್ಭಕ್ಕೆ ತಕ್ಕಂತೆ ಬಂದ ವರದಿಯಾಗಿದೆ ಇದರಲ್ಲಿ ಯಾರದು ಇತಾಶಕ್ತಿ ಇಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು ಕಾಂಗ್ರೆಸ ಪಕ್ಷದ ಕೆಲವು ಮುಖಂಡರು ಪಕ್ಷದಲ್ಲಿ ಆಗುವ ಬೆಳೆವಣಿಗೆಗಳ ಬಗ್ಗೆ ಆಸಕ್ತಿಯಿಂದ ತಮ್ಮ ಹೆಸರು ಹೇಳದೆ ಮಾಹಿತಿಯನ್ನು ಪತ್ರಿಕೆ ನೀಡುತ್ತಿದ್ದರು ಈಗಲು ಕೊಡುತ್ತಿದ್ದಾರೆ.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಇವರಿಬ್ಬರ ನಡುವೆ ಟಿಕೇಟ ಗಾಗಿ ಬಾರಿ ಗುದ್ದಾಟ ನಡೆದಿದ್ದು ಈ ಸಲ ಟಿಕೇಟ ನಿನಗಾ ಇಲ್ಲ ನನಗಾ ಯಾರದು ನಡೆಯುತ್ತಿದೆ ನೋಡೋಣ ಎನ್ನುವ ಹಂತಕ್ಕೆ ಕಬ್ಬಡಿ ಆಟ ಬಂದು ನಿಂತ್ತಿದೆ ಇದರಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ. ಮುಂದೆ ಕಾಯ್ದ ನೋಡ ಬೇಕಾಗಿದೆ.
ಹಂಪನಗೌಡರಿಗೆ ಟಿಕೇಟ ಖಚಿತ ವಾಗಿದೆ ಎಂದು ಅವರ ಬೆಂಬಲಿಗರು ಅಭಿಮಾನಿಗಳು ಪಕ್ಷದ ಕಾರ್ಯಕರ್ತರ ಜೊತೆ ಪಕ್ಷದ ಮುಖಂಡರಾದ ಪಂಪನಗೌಡ ಬಾದರ್ಲಿ ಹಾಗೂ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಬಸವರಾಜ ಹಿರೇಗೌಡರ. ಜಾಪರ ಜಾಗೀರದ್ದಾರ. .ಖಾಜಿ ಮಲ್ಲಿಕ್ .ಲಿಂಗಪ್ಪ ದಡೇಸೂಗೂರ. ಸೇರಿದಂತೆ ಇನ್ನಿತರ ಮುಖಂಡರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತಿರುಗಾಡುತ್ತ ಗ್ಯಾರಂಟಿ ಕಾರ್ಡಗಳನ್ನು ಕೊಟ್ಟ ಮಾಹಿತಿ ನೀಡುವ ಮೂಲಕ ಪಕ್ಷದ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿಯವರನ್ನು ಗೆಲ್ಲಿಸುವಂತೆ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ನಾಯಕರಾದ ಬಸನಗೌಡ ಬಾದರ್ಲಿಗೆ ಟಿಕೇಟ ಸಿಕ್ಕಿದೆ ಅವರೆ ಅಭ್ಯರ್ಥಿ ಇದರಲ್ಲಿ ಯಾವುದೆ ಅನುಮಾನ ಬೇಡ ಎಂದು ಪಕ್ಷದ ಮುಖಂಡರಾದ ಸೋಮನಗೌಡ ಬಾದರ್ಲಿ. ಶಿವಕುಮಾರ ಜವಳಿ. ವೆಂಕಟೇಶ ನಾಯಕ. ಶರಣಯ್ಯ ಕೋಟೆ. ಖಾಜಾ ರೌಡಕುಂದ. ಚನ್ನಬಸವ ಕುಂಬಾರ. ಯೂನಿಷ ಪಾಷಾ ದಡೇಸೂಗೂರ ನೇತೃತ್ವದಲ್ಲಿ ನಗರ ಹಾಗೂ ಹಳ್ಳಿಗಳಲ್ಲಿ ಮಿಂಚಿನ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ ಸರ ಯಾರೆ ಎನೆ ಹೇಳಲಿ ನಾವು ತಲೆ ಕೆಡಿಸಿಕೊಳ್ಳುವಧಿಲ್ಲ ಪಕ್ಷದ ಹೈಕಮಾಂಡ ಬಸನಗೌಡರಿಗೆ ಈ.ಸಲ ಟಿಕೇಟ್ ಗ್ಯಾರಂಟಿ ಅಂದ ಮೇಲೆ ನಾವು ಪ್ರಚಾರ ನಡೆಸುತ್ತಿದ್ದು ಜನರಿಂದ ಉತ್ತಮ ರೀತಿಯ ಬೆಂಬಲ ಸಿಗುತ್ತಿದೆ ಎಂದು ಸೋಮನಗೌಡ ಬಾದರ್ಲಿ ಪತ್ರಿಕೆ ಸ್ವಷ್ಷನೆ ನೀಡಿದರು.
ಪಕ್ಷದ ಹೈಕಮಾಂಡ ಈಗಾಗಲೆ ಪ್ರಕಟಿಸಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಸಿಂಧನೂರು ಕ್ಷೇತ್ರದ ಅಭ್ಯರ್ಥಿಯ ಹೆಸರು ಇಲ್ಲ ಮುಂದಿನ ಆಯ್ಕೆ ಪಟ್ಟಿಯಲ್ಲಿ ಹಂಪನಗೌಡರ ಹೆಸರು ಇರುತ್ತದೆ ಎಂದು ಅವರ ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ ಆದರೆ ಇನ್ನೂಂದು ಕಡೆ ಬಸನಗೌಡರಿಗೆ ಟಿಕೇಟ್ ಕನಪರ್ಮ ಯಾಗಿದೆ ಅವರೆ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂದು ಬಸನಗೌಡ ಅಭಿಮಾನಿಗಳು ವಿಶ್ವಾಸ ಹೊಂದಿದ್ದಾರೆ ಆದರೆ ಯಾರಿಗೆ ಟಿಕೇಟ್ ಸಿಗುತ್ತೇದೆ ಎನ್ನುವದು ಇವರಿಬ್ಬರಿಗೂ ಇನ್ನೂ ಗ್ಯಾರಂಟಿ ಇಲ್ಲ ಆದ್ದರಿಂದ ಹಂಪನಗೌಡ. ಬಸನಗೌಡ ಇಬ್ಬರು ಟಿಕೇಟ್ ತೆಗೆದುಕೊಂಡು ಇಲ್ಲ ಗ್ಯಾರಂಟಿ ಮಾಡಿಕೊಂಡು ಬರುವ ಸಲುವಾಗಿ ಇನ್ನೂ ದೆಹಲಿಯಲ್ಲಿ ಉಟ. ನಿದ್ದೆ ಬಿಟ್ಟು ಬೀಡಾರ ಹೂಡಿದ್ದಾರೆ. ಹಂಪನಗೌಡ ಹಾಗೂ ಬಸನಗೌಡ ಇವರಿಬ್ಬರಿಗೆ ಟಿಕೇಟ್ ಸಿಗುವ ಬಗ್ಗೆ ಅವರಿಗಿಂತ ಕ್ಷೇತ್ರದ ಜನರೆ ಚಿಂತೆ ಮಾಡಿ ತಲೆ ಕೆಡಿಸಿ ಕೊಳ್ಳುತ್ತಿದ್ದಾರೆ ಎಂದರೆ ಅಷ್ಟೊಂದು ಟಿಕೇಟ್ ತೀರ್ವ ಕುತೂಹಲ ಮೂಡಿಸಿದೆ.