ಕ,ಕ, ಪ್ರದೇಶ ಕಡೆಗಣಿಸುತ್ತಿರುವ ರಾಜ್ಯ ಸರ್ಕಾರ-ಮೇಟಿ ಶರಣಪ್ಪ

ಲಿಂಗಸುಗೂರು.ಮಾ.೨೦-ವರದಿ ಲಿಂಗಸೂಗೂರನಲ್ಲಿ ಪತ್ರಿಕಾ ಪ್ರಕಟಣೆ ಮಾಡಿದ ಬ್ಲಾಕ್ ಕಾಂಗ್ರೆಸ್ ಸಮಿತಿ ಲಿಂಗಸೂಗೂರ ಮಾಜಿ ಕಾಂಗ್ರೆಸ್ ಅಧ್ಯಕ್ಷೆರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಶರಣಪ್ಪ ಮೇಟಿ ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಬಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಹೇಳಿದರು. ರಾಯಚೂರು ಜಿಲ್ಲೆಯ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದ್ದಾರೆ ಎಂದರೂ ತಪ್ಪಿಲ್ಲ.
ಈ ಜಿಲ್ಲೆಗೆ ಹಿಂದಿನ ಸರಕಾರಗಳು ಒಂದಲ್ಲ ಒಂದು ಯೋಜನೆಗಳನ್ನು ಮಂಜೂರು ಮಾಡುತ್ತ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದು ಇತಿಹಾಸ, ಆದರೆ ಈಗಿನ ಸರಕಾರ ಜಿಲ್ಲೆಯ ಯೋಜನೆಗಳಿಗೆ ಅನುದಾನವನ್ನೇ ನೀಡದೆ ನಿರ್ಲಕ್ಷ್ಯ ಮಾಡುತ್ತಿದೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ನಡುವೆ ಒಂದು ವಿಶ್ವವಿದ್ಯಾಲಯ ಪ್ರಾರಂಭಿಸಲು ಹಿಂದಿನ ಕಾಂಗ್ರೆಸ್ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಬಸವರಾಜ ರಾಯರೆಡ್ಡಿರವರ ಪ್ರಯತ್ನದ ಫಲವಾಗಿ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮ್ಯನವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.
ತಾಂತ್ರಿಕ ಕಾರಣದಿಂದ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗಿನ ಸರಕಾರ ವಿಶ್ವವಿದ್ಯಾಲಯ ಪ್ರಾರಂಭಿಸಲು ಅಧಿಸೂಚನೆ ಹೊರಡಿಸಿದೆ ಆದರೆ ಬಜೆಟ್‌ನಲ್ಲಿ ರಾಯಚೂರು ವಿಶ್ವವಿದ್ಯಾಲಯ ಮುನ್ನಡೆಸಿಕೊಂಡು ಹೋಗಲು ಮತ್ತು ಅಭಿವೃದ್ಧಿ ಪಡಿಸಲು ಒಂದು ನಯಾಪೈಸೆ ಅನುದಾನ ನೀಡದೇ ಅನ್ಯಾಯ ಮಾಡಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ವಿಮಾನ ನಿಲ್ದಾಣಗಳು ನಿರ್ಮಾಣ ಆಗಿವೆ, ಆದರೆ ರಾಯಚೂರು ಜಿಲ್ಲೆಯಲ್ಲಿ ನಿಜಾಮರ ಕಾಲದಿಂದಲೂ ವಿಮಾನ ನಿಲ್ದಾಣಕ್ಕೆ ಭೂಮಿ ಗುರುತಿಸಲಾಗಿದ್ದು, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ೧೯೫೭ರಲ್ಲೇ ತುರ್ತು ಭೂಸ್ಪರ್ಷ ಮಾಡಿರುವದು ರಾಯಚೂರು ವಿಮಾನ ನಿಲ್ದಾಣದ ಇತಿಹಾಸ ಆದರೆ, ಅಲ್ಲಿರುವ ೪೦೪ ಎಕರೆ ಜಮೀನು ಬಳಕೆ ಮಾಡಿಕೊಂಡು ವಿಮಾಣ ನಿಲ್ದಾಣ ಮಾಡಲು ಅವಕಾಶ ಇದ್ದು, ಜಿಲ್ಲೆಯ ಜನರ ಬೇಡಿಕೆಯು ಇದ್ದು, ಈ ವರ್ಷದ ಬಜೆಟ್‌ನಲ್ಲಿ ವಿಮಾಣ ನಿಲ್ದಾಣಕ್ಕೆ ಅನುದಾನ ಘೋಷಣೆ ಮಾಡಬಹುದೆಂದು ನಿರೀಕ್ಷೆಮಾಡಲಾಗಿತ್ತು, ಆದರೆ ಸರಕಾರ ಅದನ್ನೂ ಸಹ ನಿರ್ಲಕ್ಷ್ಯ ಮಾಡಿದೆ.
ಅದೇ ರೀತಿ ರಾಯಚೂರು ಜಿಲ್ಲೆಯೂ ಆರೋಗ್ಯ ಸೇವೆಯಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಇರುವುದು ಹಲವಾರು ಸಮಿತಿಗಳ ವರದಿಗಳಲ್ಲಿ ಉಲ್ಲೇಖವಾಗಿದೆ. ಈ ಜಿಲ್ಲೆ ಮತ್ತು ಇಡೀ ಕಲ್ಯಾಣ ಕರ್ನಾಟಕಕ್ಕೆ ಉಪಯೋಗವಾಗಿದ್ದ ರಾಯಚೂರಿನ ಒಪೆಕ್ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ಸದರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಎರಿಸಿ, ಉತ್ತಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲು ಸೂಕ್ತ ಅನುದಾನ ನೀಡಬೇಕೆಂದು ಕೋರಲಾಗಿತ್ತು. ಆದರೆ ಸರಕಾರ ಈ ವರ್ಷದ ಬಜೆಟ್‌ನಲ್ಲಿ ಅದನ್ನೂ ಕೈ ಬಿಟ್ಟಿರುವದು ಜಿಲ್ಲೆಯ ಜನರ ಬಗ್ಗೆ ಈ ಸರಕಾರಕ್ಕೆ ಏಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತಿದೆ.
ಮಾನ್ಯ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ರಾಯಚೂರು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಈ ವರ್ಷದ ಬಜೆಟನಲ್ಲಿ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿರುವುದಿಲ್ಲ ಹಾಗೂ ಈ ಹಿಂದೆ ಘೋಷಣೆ ಮಾಡಲಾದ ಹತ್ತು ಹಲವು ಯೋಜನೆಗಳಿಗೆ ಅನುದಾನವೂ ನೀಡದೇ ಜಿಲ್ಲೆಯ ಜನತೆಯ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುವದು ಸ್ಪಷ್ಟವಾಗಿದೆ.
ರಾಯಚೂರು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ, ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಈ ಯೋಜನೆಗಳು ರಾಯಚೂರಿನ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮತ್ತು ಸರ್ವಜನಾಂಗದವರಿಗೆ ಉಪಯೋಗವಾಗುವ ಯೋಜನೆಗಳಾಗಿದ್ದು. ಇಂತಹ ಯೋಜನೆಗಳಿಗೆ ಈ ಪ್ರಸಕ್ತಸಾಲಿನ ಆಯ-ವ್ಯಯದಲ್ಲಿ ಅನುದಾನ ಘೋಷಣೆಮಾಡದೆ ಜಿಲ್ಲೇಯ ಕೇಲವೊಂದು ಕ್ಷೇತ್ರಗಳಿಗೆ ಮತ್ತು ಅರ್ಹತೆ ಇಲ್ಲದ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಈ ಮೂರು ಯೋಜನೆಗಳಿಗೆ ಅಭಿವೃದ್ಧಿ ಪಡಿಸಲು ಜಿಲ್ಲೆಯ ಶಾಸಕರು ಸಂಸದರು ಸಂಘಸಂಸ್ಥೆಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ.
ಕಾರಣ ಮುಂದಿನ ದಿನಮಾನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಈ ಯೋಜನೆಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಈ ಸಂದರ್ಭದಲ್ಲಿ ಲಿಂಗಸುಗೂರ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಶರಣಪ್ಪ ಮೇಟಿ, ಪುರಸಭೆ ಸದ್ಯೆಸ್ಯೆರಾದ ಪ್ರಮೋದ ಕುಲಕರ್ಣಿ, ಮುತ್ತು ಮೇಟಿ ,ಶಿವರಾಯ ದೇಗುಲಮರ ಡಿ. ಮೌಲಾಸಾಬ್, ಕಾಂಗ್ರೆಸ್ ಉಪಾಧ್ಯಕ್ಷ ಕುಪ್ಪಣ್ಣ ಕೊಡ್ಲಿ, ಮಲ್ಲಣ್ಣ ಸಾಹುಕಾರ, ಉಪಸ್ಥಿತರಿದ್ದರು.