
ಕಲಬುರ್ಗಿ, ಫೆ,21: ನಗರದಲ್ಲಿ ಇದೇ ತಿಂಗಳ 24 ರಿಂದ 26ರವರೆಗೆ ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಕಲಬುರಗಿ ವಿಶ್ವ ವಿದ್ಯಾಲಯದ ಸೇಡಂ ರಸ್ತೆಯ ಗೋಡೆಗಳ ಮೇಲೆ ಮಹಾನ ಸ್ವಾತಂತ್ರ ಹೋರಾಟಗಾರರಾದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ,ನೇತಾಜಿ ಸುಭಾಷ್ ಚಂದ್ರ ಬೋಸ್, ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್, ಭಗತ್ ಸಿಂಗ್, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಪಟೇಲ್, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಸಾಹಿತಿಗಳಾದ ಕುವೆಂಪು,ದರಬೇಂದ್ರೆ, ಸೇರಿದಂತೆ ಹಲವಾರು ಮಹಾನ್ ಸಾಧಕರ ಭಾವಚಿತ್ರಗಳು ಕಂಗೊಳಿಸುತ್ತಿರುವುದು ಕಂಡುಬಂದ ದೃಶ್ಯ.