ಕಕ ಉತ್ಸವದಲ್ಲಿ ಹತ್ತಾರು ತಳಿಗಳ ಶ್ವಾನಗಳ ಸಂಭ್ರಮ

ಕಲಬುರಗಿ,ಫೆ.26: ಕಲ್ಯಾಣ ಕರ್ನಾಟಕ ಉತ್ಸವದ ಕೊನೆ ದಿನವಾದ ರವಿವಾತ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಒಳಾಂಗಣ ಕ್ರೀಡಾಂಗಣದಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಆಯೋಜಿಸಲಾಗಿದ್ದ ಶ್ವಾನ ಪದರ್ಶನ ಮೇಳದಲ್ಲಿ ಜಿಲ್ಲೆಯ ಹತ್ತಾರು ತಳಿಗಳ ಶ್ವಾನಗಳು ಪ್ರದರ್ಶನಗೊಂಡವು.

ನೂರಾರು ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳೊಂದಿಗೆ ಸಂಭ್ರಮ ಮತ್ತು ಉತ್ಸಾಹದಿಂದ ಭಾಗಿಯಾದರು. ಕಾರ್ಯಕ್ರಮಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್ ಪಡೆಯ ಶ್ವಾನದಳದಿಂದ ಅಪರಾಧಿಗಳ ಪತ್ತೆ ಮಾಡುವ ಜರ್ಮನ್ ಶೆಫರ್ಡ್ ಮತ್ತು ವಿಐಪಿ ಭದ್ರತಾ ಪರಿಶೋಲನೆ ಮಾದಕ ವಸ್ತು ಸ್ಫೋಟಕಗಳನ್ನು ಪತ್ತೆ ಹಚ್ಚಲು ಬಳಸುವ ಲ್ಯಾಬ್ರೊಡಾಲ್ ತಳಿಗಳಿಂದ ಮಾನವರ ಬೆವರ ವಾಸನೆಯಿಂದಲೇ ಆ ವ್ಯಕ್ತಿ ಪತ್ತೆ ಮಾಡುವ, ಮಾಲೀಕನಿಗೆ ನಿμÉ್ಠಯಿಂದ ಇರುವ ಹಲವು ಪ್ರಸಂಗಗಳನ್ನು ಅಣಕು ಪ್ರದರ್ಶನದಲ್ಲಿ ಮಾಡಿ ತೋರಿಸಿದ ಡಿ.ಎ.ಆರ್. ಪೆÇಲಿಸ್ ಶ್ವಾನದಳದ ವಿಶೇಷ ಅಣಕು ಪ್ರದರ್ಶನ ಶ್ವಾನ ಪ್ರಿಯರಲ್ಲಿ ಆಸಕ್ತಿ ಕೆರಳಿಸಿತು.  
ಈ ಸಂದರ್ಭದಲ್ಲಿ ಪಶು ಸಂಗೋಪನೆ ಮತ್ತು ಪಶುವೈದ್ಯ ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ. ಸಿರಾಜ್ ಅಹ್ಮದ್, ಕರ್ನಾಟಕ ಪಶು ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಶಿವಶರಣ ಯಲಗೋಡ್ ಸೇರಿದಂತೆ ಪಶು ವೈದ್ಯ ತೀರ್ಪುಗಾರರು ಹಾಗೂ ನೂರಾರು ಸಂಖ್ಯೆಯಲ್ಲಿ ಮಾಲೀಕರು ತಮ್ಮ ನೆಚ್ಚಿನ ತಳಿಗಳ ಶ್ವಾನಗಳೊಂಗಿಗೆ ಭಾಗಿಯಾದರು. ನಂತರ ವಿಜೇತ ಶ್ವಾನ ಮಾಲೀಕರುಗಳಿಗೆ ಬಹುಮಾನ ವಿತರಿಸಲಾಯಿತು.