ಕಕ್ಷಿದಾರರಿಗೆ ಕಾನೂನಿನ ಅರಿವು ನೆರವು ಅತ್ಯಗತ್ಯ:ದಾನೇಶ ಅವಟಿ

ವಿಜಯಪುರ:ಜೂ.13: ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಕಕ್ಷಿದಾರರಿಗೆ ನ್ಯಾಯವಾದಿಗಳು ಕಾನೂನಿನ ಅರಿವು – ನೀಡುವದು ಅತ್ಯಗತ್ಯ ಎಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.
ನಗರದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದ ಬನ್ಸಿಲಾಲ್ ವಿಠ್ಠಲ್ ದಾಸ್ ದರಬಾರ ಪದವಿ ಮಹಾವಿದ್ಯಾಲಯ.ಬೆಳಗಾವಿರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪ್ರಮುಖ ಉಪನ್ಯಾಸಕರಾಗಿ ಮಾತನಾಡಿದ ಅವರು ಜನರು ಅಜ್ಞಾನ.ಅನಕ್ಷರತೆ.ಬಡತನ ಕಾನೂನಿನ ಜ್ಞಾನದ ಕೊರತೆ.ನ್ಯಾಯದಾನದ ವಿಳಂಬದ ಕಾರಣ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು. ಇಂತಹ ಶಿಬಿರಗಳಲ್ಲಿ ಕಾನೂನಿನ ಅರಿವು ಮೂಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕರಲ್ಲಿ ಬಡ ಕಕ್ಷಿದಾರರಿಗೆ ಸಹಾಯ ಮಾಡಿದಂತಾಗುತ್ತದೆ. ವಾರ್ಷಿಕ ಆದಾಯ ಕಡಿಮೆ ಇರುವವರು. ವಿಧವೆಯರು, ವಿಕಲಚೇತನರು, ಹಿರಿಯ ನಾಗರಿಕರು, ದೌರ್ಜನ್ಯಕ್ಕೆ ಒಳಗಾದವರು. ನೆರೆ ಬರದಂತಹ ಪ್ರಕೃತಿ ವಿಕೋಪಕ್ಕೆ ಬಲಿಯಾದವರು. ಮಕ್ಕಳು ತಾಲೂಕಾ ಮಟ್ಟದ ನ್ಯಾಲಯದಿಂದ ಸರ್ವೋಚ್ಚ ನ್ಯಾಯಾಲಯದವರೆಗೂ ಉಚಿತ ಕಾನೂನು ನೆರವು ಪಡೆಯಬಹುದು ಅವರಿಗಾಗಿಯೇ ಮೀಸಲಾಗಿರುವ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರಾಜು ಬ ಕಪಾಳಿ ಅವರು ಕಾರ್ಯಕ್ರಮ ಸಂಯೋಜಸಿ ರಾಷ್ಟೀಯ ಸೇವಾ ಯೋಜನೆಯ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ. ಸೇವಾ ಮನೋಭಾವ. ಸಹಾಯ ಸಹಕಾರ ಗ್ರಾಮೀಣ ಜನರ ಬದುಕು ಸುಧಾರಣೆ.ಶ್ರಮದಾನ. ರಕ್ತದಾನ ಮಹತ್ವ ಮುಂತಾದವುಗಳನ್ನು ತಿಳಿಸಿ ಉತ್ತಮ ಪ್ರಜೆಗಳಾಗಿ ರೂಪಿಸಲಾಗುತ್ತದೆ.ಎಂದು ತಿಳಿಸಿದರು.
ಕುಮಾರಿ ಪೂಜಾ ಘಂಟಿ ಪ್ರಾರ್ಥಿಸಿದರು.ಮಾರಿಯಾ ಮುಲ್ಲಾ ಸ್ವಾಗತಿಸಿದರು. ಸಂಗೀತಾ ಸಾರವಾಡ ನಿರೂಪಿಸಿದರು. ದೀಪಾ ಕತ್ನಳ್ಳಿ ವಂದಿಸಿದರು.ಎನ್ನೆಸಸ್ ಸಾಮೂಹಿಕ ಗೀತೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.