ಕಕಮರಿಯಲ್ಲಿ 488 ಲಕ್ಷ ರೂಗಳ ರಸ್ತೆ ಕಾಮಗಾರಿಗೆ ಶಾಸಕ ಕುಮಠಳ್ಳಿ ಭೂಮಿಪೂಜೆ

ಅಥಣಿ :ಮಾ.25: ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿಯನ್ನು ಮಾಡಿಕೊಟ್ಟರೆ ಆ ಗ್ರಾಮಗಳು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಪ್ರತಿಯೊಂದು ಗ್ರಾಮಕ್ಕೆ ಉತ್ತಮ ಮತ್ತು ಸುಸಜ್ಜಿತ ರಸ್ತೆ ನಿರ್ಮಿಸುವುದರ ಮೂಲಕ ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಪಟ್ಟಣಕ್ಕೆ ಪೂರೈಸಿ ಅತಿಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗಾಗಿ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ನನ್ನ
ಮೊದಲ ಆದ್ಯತೆ ನೀಡಿದ್ದೇನೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಮಹೇಶ ಕುಮಠಳ್ಳಿ ಮಹೇಶ್ ಕುಮಠಳ್ಳಿ
ಅವರು ಹೇಳಿದರು.
ಅವರು ಕಕಮರಿ ಗ್ರಾಮದಲ್ಲಿ 1 ಕೋಟಿ 88 ಲಕ್ಷ ರೂ ವೆಚ್ಚದ ಕಕಮರಿಯಿಂದ ರಾಮತೀರ್ಥ
(ಮಹಾರಾಜರ ತೋಟ) ರಸ್ತೆ ಕಾಮಗಾರಿ,
3 ಕೋಟಿ ವೆಚ್ಚದ ರಾಜ್ಯದ ಗಡಿಯಿಂದ ಉಮರಾಣಿ ಕಕಮರಿ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು
ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಶಿವಾನಂದ
ಸಿಂಧೂರ, ರಮೇಶ ಧುಮಾಳೆ, ನಿಂಗಪ್ಪ ನಂದೇಶ್ವರ, ಅಧಿಕಾರಿಗಳಾದ ಗೌಡಪ್ಪ ಘೊಳಪ್ಪನವರ, ಎ ಜೆ ಮುಲ್ಲಾ, ವೀರಣ್ಣ ವಾಲಿ ಸೇರಿದಂತೆ ಗ್ರಾಮದ ಮುಖಂಡರು ಪಕ್ಷದ ಕಾರ್ಯಕರ್ತರು ಯುವಕರು ಭಾಗವಹಿಸಿದ್ದರು.