ಕಂಬಳಿ ಬೀಸಿ ಮಳೆ ತಂದ ಕನ್ನಯ್ಯ ಮುತ್ಯಾ

ಸಿಂದಗಿ :ಮಾ.9: ಸಂತರು, ಶರಣರು, ಸತ್ ಪುರುಷರು, ನಡೆದಾಡಿದ ನಾಡು ನಮ್ಮದು ಬರದಲ್ಲಿ ಬಿತ್ತನೆ ಮಾಡುತ್ತಿರುವ ಸಂದರ್ಭದಲ್ಲಿ ಕೆರೆಯ ದಡದ ಮೇಲೆ ನಿಂತು ಕಂಬಳಿ ಬೀಸಿ ಮಳೆ ತಂದ ಕೀರ್ತಿ ಸಿದ್ದಿಪುರುಷ ಕನ್ನಯ್ಯ ಮುತ್ಯಾ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಜಿ. ಪಂ. ಸದಸ್ಯ ನಸಿರ್ಂಗ್ ಪ್ರಸಾದ ತಿವಾರಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗುರುವಾರ ರಾತ್ರಿ ಗ್ರಾಮದ ಆರಾಧ್ಯದೇವ ಶ್ರೀ ಕನ್ನಯ್ಯ ಮುತ್ಯಾ ಅವರ 101ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ 11 ನೇ ವರ್ಷದ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿ ಶ್ರೀ ವೀರ ಮಲಕಾರಿಸಿದ್ದೇಶ್ವರ ಮಹಾತ್ಮೆ ನಾಟಕ ಅರ್ತಾರ್ಥ ತಾಯಿ ಮಗನ ಸಂವಾದ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಯ್ಯ ಮುತ್ಯಾ ಅವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು ಪರಮಾತ್ಮನಲ್ಲಿ ಭಕ್ತಿ ಶ್ರದ್ದೆಯಿಂದ ನಡೆದುಕೊಂಡು ಭಕ್ತರ ಮನೆಯಲ್ಲಿ ಮಾಟ ಮಂತ್ರ ಆದಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದಲ್ಲಿ ತಮ್ಮ ಭಕ್ತಿಯ ಮಂತ್ರಶಕ್ತಿಯಿಂದ ಭಂಡಾರ ಸಿಂಪಡಿಸಿ ವಾಸಿ ಮಾಡಿ ನಡೆದಾಡುವ ದೇವರು ಎಂದೆಂಸಿಕೊಂಡವರು ಎಂದರು.
ಸುತ್ತಲಿನ ಗ್ರಾಮಸ್ಥರ ಆಗಮನ ಶ್ರೀ ವೀರ ಮಲಕಾರಿಸಿದ್ದರ ಮಹಾತ್ಮೆ ಅರ್ತಾರ್ಥ ತಾಯಿ ಮಗನ ಸಂವಾದ ಎಂಬ ಸುಂದರವಾದ ನಾಟಕ ಕಾರ್ಯಕ್ರಮದಲ್ಲಿ ಕುಳೇಕುಮಟಗಿ, ಬಗಲೂರ, ಶಿರಸಗಿ, ಹಾವಳಗಿ, ಕಕ್ಕಳಮೇಲಿ, ಗಾಬಸಾವಳಗಿ, ಸೇರಿದಂತೆ ಅನೇಕ ಗ್ರಾಮದ ಭಕ್ತಾದಿಗಳು ರಾತ್ರಿವಿಡೀ ನಾಟಕ ವೀಕ್ಷಿಸಿದರು.
ಕಾರ್ಯದಲ್ಲಿ ಶ್ರೀ ಬಿಳಿಯಾನಿಸಿದ್ದ ಒಡಿಯರ ಸಾನಿಧ್ಯ ವಹಿಸಿದ್ದರು, ಹಿರಿಯರಾದ ಮೈಬೂಬ ಸಾಬ ಕಣ್ಣಿ, ಮಾಜಿ ತಾ. ಪಂ. ಸದಸ್ಯ ಶಿವರಾಯ ಹಿಪ್ಪರಗಿ, ವೀರನಗೌಡ ಪಾಟೀಲ್, ಬಿ. ಟಿ. ಬೋನಾಳ, ಎನ್ ಎನ್ ಪಾಟೀಲ್, ಸೇರಿದಂತೆ ಗ್ರಾ. ಪಂ. ಸರ್ವ ಸದಸ್ಯರು ಇದ್ದರು.