ಕಂಬಳಿ ಬಜಾರ್ ನ ಕಮಲೇಶ್ ಜೈನ್ ಮನೆಯಲ್ಲಿಸಿಕ್ತು 23 ಲಕ್ಷ ನಗದು, ಚಿನ್ನ, 13 ಕಿಲೋ ಬೆಳ್ಳಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ನಗರದ  ಗ್ರಾಮೀಣ, ಬ್ರೂಸ್ ಪೇಟೆ ಪೊಲೀಸರು ಹಾಗು  ಎಫ್.ಎಸ್.ಟಿ., ವಿವಿಎಸ್‌ಟಿ ತಂಡ  ನಗರದ ಚುನ್ನಿಲಾಲ್ ರಾಕೇಶ್ ಕುಮಾರ್ ಷಾ ಜ್ಯೂವೆಲರ್ಸ್ ನ ಮಾಲೀಕ ಕಮಲೇಶ್ ಜೈನ್ ಅವರ ಕಂಬಳಿ ಬಜಾರ್ ನ ಮನೆಯನ್ನು ತಪಾಸಣೆ ಮಾಡಿ.
23 ಲಕ್ಷರೂ  ನಗದು ಹಣ,  450 ಗ್ರಾಂ ಬಂಗಾರದ ವಸ್ತುಗಳು,  13 ಕೆ.ಜಿ. ಬೆಳ್ಳಿ ಆನಧೀಕೃತವಾಗಿ ಯಾವುದೇ ದಾಖಲಾತಿಗಳು ಇಲ್ಲದೇ ದೊರೆತಿದ್ದರಿಂದ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
 ಇವುಗಳು ಮುಂಬರುವ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಳಸಬಹುದೆಂಬ ಸಂದೇಹ ಇರುತ್ತದೆ. ಇವುಗಳನ್ನು ಮುಂದಿನ ವಿಚಾರಣೆಗಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು ಪರಿಶೀಲನೆ ಮುಂದುವರೆದಿದೆಂದು ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.