ಕಂಬದಿಂದ ಬಿದ್ದ ಲೈನ್ ಮ್ಯಾನ್ ಗೆ ಗಾಯ ಇಲಾಖೆಯ ನಿರ್ಲಕ್ಷವೇ ಕಾರಣ: ಗ್ರಾಮಸ್ಥರ ಆರೋಪ

ಕೊಟ್ಟೂರು ಏ 16 : ವಿದ್ಯುತ್ ಅವಘಡ ಸಂಭವಿಸಿ ಕಂಬದಲ್ಲಿ ಕಾರ್ಯನಿರ್ವಾಹಿಸುತ್ತಿದ ಲೈನ್ ಮ್ಯಾನ್ ಕಂಬದಿಂದ ಕೆಳಗಡೆ ಬಿದ್ದು ಗಾಯಗಳಾಗಿರುವ ಘಟನೆ ತಾಲ್ಲೂಕಿನ ಬೈರದೇವರಗುಡ್ಡದಲ್ಲಿ ಗುರುವಾರ ಸಂಭವಿಸಿದೆ, ಕಂಬದಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಸಂಪರ್ಕ ಹೊದಗಿಸಿರುವುದೆ ಘಟನೆಗೆ ಕಾರಣವಾಗಿದೆ.
ಉಜ್ಜಿನಿ ಗ್ರಾಮದ ಲೈನ್ ಮ್ಯಾನ್ ರಾಘವೇಂದ್ರ ಗಾಯಗೊಂಡಿರುವ ಯುವಕ. ಉಜ್ಜಿನಿ ಪವರ್ ಸ್ಟೇಷನ್ ವ್ಯಾಪ್ತಿಯ ಬೈರದೇವರಗುಡ್ಡ ಗ್ರಾಮದಲ್ಲಿ ಕಂಬದಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದೆ, ತಿವ್ರ ಗಾಯಗಳಾಗಿದ್ದು ದಾವಣಗೇರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಉಜ್ಜಿನಿ ಗ್ರಾಮದ ಪವರ್ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿದರು.
ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳಬೇಕಿದೆ, ಜೆಇ ಹಾಗೂ ಸಿಬ್ಬಂದ್ದಿಯ ನಿರ್ಲಕ್ಷವೇ ಘಟನೆಗೆ ಕಾರಣವಾಗಿದ್ದು, ಕೂಡಲೇ ಜೆಇ ಕೊಟ್ರೇಶ್ ಅವರನ್ನು ಸ್ಥಳಕ್ಕೆ ಕರೆಸುವಂತೆ ಗ್ರಾಮಸ್ಥರು ಪಟ್ಟು ಹಿಡಿದು ಹಿಡಿದು ವಿದ್ಯುತ್ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ತನಿಖೆ ಕೈಗೊಂಡು ಘಟನೆಗೆ ಕಾರಣರಾದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜೇಸ್ಕಾಂ ಎಇಇ ರಾಜೇಶ್ ಹಾಗೂ ಎಇ ವಿಜಯ ಕುಮಾರ್ ಗ್ರಾಮಸ್ಥರಿಗೆ ತಿಳಿಸಿದಾಗ ವಿದ್ಯುತ್ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟರು.
ಗ್ರಾಮಸ್ಥರಾದ ರಂಗಪ್ಪ, ಅಳವರ ಮಳ್ಳಪ್ಪ, ಸಿದ್ದೇಶ್ ಪಾಟೀಲ್, ನವೀನ್, ನಾಗರಾಜ, ವಿರೇಶ್, ಬಸೀರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ ಪರಸಪ್ಪ, ಸದಸ್ಯರಾದ ರವಿ ವೈ, ಕುರುಗೋಡು ಸಿದ್ದೇಶ್ ಇದ್ದರು