ಕಂಪ್ಲಿ 4ನೇ ವಾರ್ಡ್ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ್ ಚಾಲನೆ

ಕಂಪ್ಲಿ, ಏ.04: ಪಟ್ಟಣದ 4ನೇ ವಾರ್ಡ್ ಪ್ರದೇಶದಲ್ಲಿ 2020-21ನೇ ಸಾಲಿನ ಎಸ್ ಎಫ್ ಸಿ ಅನುದಾನದ ಅಡಿಯಲ್ಲಿ ಒಟ್ಟು 24.41 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಣಾಪುರ ರಸ್ತೆಯಿಂದ ಮಾರ್ಕೆಟ್ ಶಾಲೆ ಹಿಂಭಾಗದವರೆಗೆ ಹಾಗು ಮಾರ್ಕೆಟ್ ಶಾಲೆಯಿಂದ ವಿ ಆರ್ ಎಲ್ ಕಚೇರಿವರೆಗಿನ ಬಿ ಟಿ ರಸ್ತೆ ಕಾಮಗಾರಿಗೆ ಭಾನುವಾರ ಶಾಸಕ ಜೆ ಎನ್ ಗಣೇಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ತಾಪಂ ಸದಸ್ಯ ಕೆ.ಷಣ್ಮುಖಪ್ಪ, ಕಂಪ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಶಿಕುಮಾರ್, 4ನೇ ವಾರ್ಡ್ ಪುರಸಭೆ ಸದಸ್ಯ ಕೆ ಎಸ್ ಚಾಂದ್ ಭಾಷ, ಪುರಸಭೆ ಸದಸ್ಯರಾದ ನಾಗಮ್ಮ ಸತ್ಯಪ್ಪ, ಪಿ.ಮೌಲಾ, ಲಡ್ಡು ಹೊನ್ನೂರ್ ವಲಿ, ಉಸ್ಮಾನ್, ವೀರಾಂಜನೇಯಲು, ವಾರ್ಡ್ ಮುಖಂಡರಾದ ಯಲ್ಲಪ್ಪ,ಎಂ ಸಿ ಮಾಯಪ್ಪ, ಆಟೋ ರಾಘವೇಂದ್ರ, ಅಕ್ಕಿ ಜಿಲಾನ್, ಎಂ ರಾಜಭಕ್ಷಿ ಸೇರಿದಂತೆ ಅನೇಕರಿದ್ದರು.