ಕಂಪ್ಲಿ ಸೈಯ್ಯದ್ ನಂತಹ ಸಮಾಜಮುಖಿ ಶಿಕ್ಷಕ ಮತ್ತೊಮ್ಮೆ ಹುಟ್ಟಿ ಬರಲಿ

ಬಳ್ಳಾರಿ, ಮೇ.19: ಜಿಲ್ಲೆಯ ಕಂಪ್ಲಿ ತಾಲೂಕಿನ ಕಸಾಪ ಕಾರ್ಯದರ್ಶಿ, ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಉದಯೋನ್ಮುಖ ಬರಹಗಾರ ಸೈಯದ್ ಹುಸೇನ್ ಅವರ ಆತ್ಮಕೆ ಶಾಂತಿ ಕೋರಿ ಇಲ್ಲಿನ ಅವರ ಮಿತ್ರರು, ಜಿಲ್ಲಾ ಕಸಾಪ ದ ಪದಾಧಿಕಾರಿಗಳು ಅವರ ಭಾವಚಿತ್ರಕೆ ಪುಷ್ಪ ಹಾಕುವುದರ ಮೂಲಕ ಮೃತರ ಆತ್ಮಕೆ ಶಾಂತಿಕೋರಿದ್ದಾರೆ.
ಈ ಸಂದರ್ಭದಲಿ ಅವರ ಒಡನಾಟ ನೆನೆದು, ಬಡತನದಲ್ಲಿ ಬೆಳೆದು ಬಂದಿದ್ದ ಸೈ ಅವರು ತಮ್ಮ ಮನೆಯಲ್ಲಿಯೇ ಸ್ವಂತ ವೆಚ್ಚದಿಂದ ಗ್ರಂಥಾಲಯ ಸ್ಥಾಪಿಸಿ ಬಡ ವಿಧ್ಯಾರ್ಥಿಗಳಿಗೆ ಸಹಾಯವಾಗಿದ್ದರು ಎಂದು ಜಿಲ್ಲಾ ಕಸಾಪ ದ ಅಧ್ಯಕ್ಷ ಸಿದ್ರಾಮ ಕಲ್ಮಠ ಮತ್ತು ಅಂಶಿ ಪ್ರಕಾಶನದ ಪಂಪಾಪತಿ.ಟಿ.ಎಮ್.ಮತ್ತು ವೀರೇಂದ್ರ ರಾವಿಹಾಳ್ ನೆನೆದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಕರಡಕಲ್ ವೀರೇಶ, ಅಮರೇಶ, ಮಂಜುನಾಥ ಕಮ್ಮರಚೇಡು, ವಲಿ ಭಾಷ, ರಫೀಕ್ ಶಿಡಗಿನಮೊಳ, ಸಾಲಿ ಸೋಮನಾಥ ಮೊದಲಾದ ಅವರ ಒಡನಾಡಿಗಳು ಇದ್ದರು.