ಕಂಪ್ಲಿ ಪುರಸಭೆ ಕಚೇರಿಗೆ ಪ್ರಭಾರೆ ಮುಖ್ಯಾಧಿಕಾರಿಯಾಗಿ ನಾಗೇಶ್

ಕಂಪ್ಲಿ, ಜೂ.02: ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ರಮೇಶ ಬಡಿಗೇರ್ ಕೊಪ್ಪಳ ಪುರಸಭೆಯ ಪೌರಾಯುಕ್ತರಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಕಮಲಾಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಾಗೇಶ್ ಅವರು ಇಲ್ಲಿನ ಪ್ರಭಾರೆ ಮುಖ್ಯಾಧಿಕಾರಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ವರ್ಗ, ಸರ್ವ ಸದಸ್ಯರು, ಪುರಸಭೆಯ ಮಾಜಿ ಮುಖ್ಯಾಧಿಕಾರಿ ರಮೇಶ್ ಬಡಿಗೇರ್ ಸೇರಿದಂತೆ ಅನೇಕರಿದ್ದರು. ಇದೇ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಪೌರಾಯುಕ್ತರಾಗಿ ಮುಂಬಡ್ತಿ ಪಡೆದ ಮಾಜಿ ಮುಖ್ಯಾಧಿಕಾರಿ ರಮೇಶ ಬಡಿಗೇರಗೆ ಸನ್ಮಾನಿಸಿ ಬೀಳ್ಕೊಡಲಾಯಿತು.