ಕಂಪ್ಲಿ ಪತ್ರಕರ್ತರಿಗೆ ಪಡಿತರ ಕಿಟ್ ವಿತರಣೆ

ಕಂಪ್ಲಿ ಜೂ 06: ಶಾಸಕ ಜೆ.ಎನ್.ಗಣೇಶ್ ಹುಟ್ಟುಹಬ್ಬ ನಿಮಿತ್ತ ಸ್ಥಳೀಯ ಮುಖಂಡರಾದ ಕಂಬಳಿ ರಾಮಕೃಷ್ಣ, ಬಳೆ ಮಲ್ಲಿಕಾರ್ಜುನ, ಕೆ.ತಿಮ್ಮಯ್ಯ, ಸಿ ಡಿ ರಾಜಶೇಖರ್ ಅವರಿಂದ ಶನಿವಾರ ಮಧ್ಯಾಹ್ನ ತಾಲೂಕಿನ 25 ಪತ್ರಕರ್ತರಿಗೆ ಉಚಿತ ಪಡಿತರ ಕಿಟ್‍ಗಳನ್ನು ವಿತರಿಸಲಾಯಿತು.
ಪತ್ರಕರ್ತರನ್ನು ಹಾಗು ಮಾಧ್ಯಮ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಎಂದು ಸರ್ಕಾರ ಘೋಷಿಸಿದೆ. ಆದರೆ, ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಪತ್ರಕರ್ತರಿಗೆ ಯಾವುದೇ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿಲ್ಲ. ಹೀಗಾಗಿ, ಸಂಸ್ಥೆ ಸಿಬ್ಬಂದಿಗಳಾಗಿರುವ ಹಾಗು ಸಂಸ್ಥೆ ಸಿಬ್ಬಂದಿಗಳಲ್ಲದ ತಾಲೂಕು ಮಟ್ಟದ ಪತ್ರಕರ್ತರಿಗೆ ಸೇರಿದಂತೆ ಎಲ್ಲರಿಗೂ ಸರ್ಕಾರ ಕೋವಿಡ್-19 ವಿಶೇಷ ಪರಿಹಾರ ಪ್ಯಾಕೇಜ್ ಒದಗಿಸಬೇಕು ಎಂದು ಸಿದ್ದರಾಮಯ್ಯ ಯುವ ಬ್ರಿಗೇಡ್ ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕಂಬಳಿ ರಾಮಕೃಷ್ಣ, ಯುವ ಕಾಂಗ್ರೆಸ್ ಬಳ್ಳಾರಿ ಜಿಲ್ಲಾ ಗ್ರಾಮೀಣ ವಲಯದ ಪ್ರಧಾನ ಕಾರ್ಯದರ್ಶಿ ಕೆ.ತಿಮ್ಮಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಕಂಪ್ಲಿ ತಾಲೂಕಧ್ಯಕ್ಷ (ನಾರಾಯಣ ಗೌಡ ಬಣ) ಬಳೆ ಮಲ್ಲಿಕಾರ್ಜುನ ಹಾಗು ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷ ಸಿ ಡಿ ರಾಜಶೇಖರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಜಗದೀಶ, ರಮೇಶ್, ಕುಮಾರ್, ವಿಶ್ವ ಸೇರಿದಂತೆ ಅನೇಕರಿದ್ದರು.