ಕಂಪ್ಲಿ : ತಾಲೂಕಿನ ವಿವಿಧೆಡೆ “ಆಯುಷ್ಮಾನ್” ಆಭಿಯಾನ

ಕಂಪ್ಲಿ ಮಾ 31 : ಬಳ್ಳಾರಿಯ ಜಿಲ್ಲಾ ಸರ್ವೇಕ್ಷಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಾವಿನಹಳ್ಳಿಯ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಟ್ರಸ್ಟ್ ನ ಹೇಮೇಶ್ವರ ಅವರ ಜಾನಪದ ಕಲಾತಂಡವು ಮಾ.30ರ ಮಂಗಳವಾರದಂದು ಕಂಪ್ಲಿ ಪಟ್ಟಣ ಸೇರಿದಂತೆ ಕಂಪ್ಲಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಮೆಟ್ರಿ, ಸೋಮಪ್ಪ ಕ್ಯಾಂಪ್ ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಅಭಿಯಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಒಟ್ಟು ಮೂರು ಪ್ರದರ್ಶನಗಳನ್ನು ನೀಡಿತು.
ಕಂಪ್ಲಿ ನಗರದ ಎಂ.ಡಿ. ಕ್ಯಾಂಪ್ 2ನೇ, 15ನೇ ಕೇಂದ್ರ, 22ನೇ ವಾರ್ಡ್, ತಾಲೂಕಿನ ಮೆಟ್ರಿ, ಶ್ರೀರಾಮರಂಗಾಪುರ ಕಂಪ್ಲಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಮೆಟ್ರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಒಳಪಟ್ಟ ಸೋಮಪ್ಪ ಕ್ಯಾಂಪ್ ಹಾಗು ವಿವಿಧ ಹಳ್ಳಿಗಳಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅಭಿಯಾನ, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ, ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆರೋಗ್ಯ ಸೇವೆಗಳು ಕುರಿತು ಜಾನಪದ ಕಲಾತಂಡವು ಬೀದಿ ನಾಟಕ ಮುಖೇನ ಜನರ ಗಮನ ಸೆಳೆಯಿತು.
ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ಕೊಟ್ಟು ಆರೋಗ್ಯ ಸಮಸ್ಯೆಗಳಿಗೆ ಅಲ್ಲಿ ನೇಮಕಗೊಂಡಿರುವ ಸಮುದಾಯ ಅಧಿಕಾರಿಗಳ ಹತ್ತಿರ ಸಮಸ್ಯೆಗೆ ಪರಿಹಾರ ಪಡೆದು ಕೊಳ್ಳುವ ಕುರಿತು, ತಾಯಿ ಆರೈಕೆ, ಯೋಗಾಭ್ಯಾಸ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕುರಿತ, ವಿವಿಧ ಖಾಯಿಲೆಗಳಿಗೆ ಅವಶ್ಯವಿರುವ ಔಷಧೋಪಾಚಾರ ವಿಧಾನದ ಕುರಿತು, ವಿವಿಧ ರೋಗಗಳ ಪತ್ತೆ ಮಾಡುವಲ್ಲಿ ಮಾಡಿಸಬೇಕಾದ ಪರೀಕ್ಷೆ ಹಾಗು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಸೇರಿದಂತೆ ತರಹೇವಾರಿ ಅಗತ್ಯ ಮಾಹಿತಿಯನ್ನು ಅತ್ಯಂತ ಸ್ಪಷ್ಟವಾಗಿ ಕಲಾತಂಡದ ಕಲಾವಿದರು ಜನರಿಗೆ ತಿಳಿಸಿ ಕೊಟ್ಟರು.
ಅಭಿಯಾನದಲ್ಲಿ ಆರೋಗ್ಯ ವೈದ್ಯಾಧಿಕಾರಿಗಳಾದ ಕೆ ರೇವಣ್ಣ ಸಿದ್ದ,ಎರ್ರಿಸ್ವಾಮಿ ,ಶ್ರೀ ನಿವಾಸ, ಶೈನಜ್ , ಮಂಜುಳಾ, ಶೋಭಾ, ಸೌಭಾಗ್ಯ, ಶಶಿಕಲಾ, ಸುಜಾತಾ, ಅಂಗನವಾಡಿ ಕಾರ್ಯಕರ್ತೆ ಗುರುಪಾದಮ್ಮ, ಆಶಾ ಕಾರ್ಯಕರ್ತೆ ಮಮತ, ಹೆಚ್ ಚಂದ್ರಲೇಖ, ಶಾಲಾ ಶಿಕ್ಷಕರಾದ ಜೆ.ಎಂ.ಕೊಟ್ರೇಶ, ಸರ್ವೇಶ್ವರಿ ವಿ.ಎಮ್., ಆಯುಷ್ಮಾನ ಭಾರತ ಮತ್ತು ಆರೋಗ್ಯ ಆರೋಗ್ಯ ಸಿಬ್ಬಂದಿ, ಹಿರಿಯ ಹಾಗು ಕಿರಿಯ ಆರೋಗ್ಯ ಸಹಾಯಕರ ತಂಡ ಕರ್ನಾಟಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಗ್ಗೆ ಜಾಗೃತಿ ಕಾರ್ಯಕ್ರಮ ಮೂಡಿಸಿದರು. ಟ್ರಸ್ಟ್ ನ ಜಾನಪದ ಕಲಾತಂಡದ ಕಾರ್ಯದರ್ಶಿ ಕುರುಬರ ಕೆ ಹೇಮೇಶ್ವರ, ಕಲಾವಿದರಾದ ಹೊನ್ನುರಸ್ವಾಮಿ,ಚೌಡಪ್ಪ, ಮಂಜುಳಾ,ಲಲಿತಾ, ದೊಡ್ಡಬಸಪ್ಪ, ಜೈತುನ ಬೀ,ಅರ್ಜುನ, ವಿವಿಧ ಗ್ರಾಮಗಳ ಮುಖಂಡರು, ಗ್ರಾಮಗಳ ಗ್ರಾಪಂ ಸದಸ್ಯರು, ವಿವಿಶ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.