ಕಂಪ್ಲಿ ತಹಸಿಲ್ದರ್ ದಾಳಿ 45 ಟನ್ ಅಕ್ರಮ ಮರಳು ವಶ

ಕಂಪ್ಲಿ ಜೂ 02 : ತಾಲೂಕಿನ ಸಣಾಪುರ ಗ್ರಾಮ ಪಂಚಾಯ್ತಿ ಕಚೇರಿ ಆವರಣದ ಮುಂಭಾಗ ಸೇರಿದಂತೆ ಗ್ರಾಮದ 3 ಕಡೆ ರಸ್ತೆ ಬದಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳನ್ನು ತಹಸಲ್ದಾರ್ ನೇತೃತ್ವದ ತಂಡ ಮಂಗಳವಾರ ರಾತ್ರಿ ವಶಪಡಿಸಿಕೊಂಡಿದೆ.

ನಿಖರ ಮಾಹಿತಿ ಆಧಾರದ ಮೇಲೆ ಗ್ರಾಮಕ್ಕೆ ತೆರಳಿದ ತಂಡ ವಶಪಡಿಸಿಕೊಂಡ ಮರಳನ್ನು ಪಿಡಬ್ಲ್ಯುಡಿ ಇಲಾಖೆ ವಶಕ್ಕೆ ನೀಡಿದೆ.

ರಸ್ತೆ ಬದಿ ದಾಸ್ತಾನು ಮಾಡಿದ್ದರಿಂದ ಅದು ಯಾರಿಗೆ ಸೇರಿದ್ದು ಎಂದು ತಿಳಿದು ಬಂದಿಲ್ಲ. ಆದರೆ, ದಾಳಿ ಸಂದರ್ಭದಲ್ಲಿ ಓರ್ವ ವ್ಯಕ್ತಿ ಟ್ರ್ಯಾಕ್ಟರ್ ಮೂಲಕ ಮರಳನ್ನು ಸಾಗಣೆ ಮಾಡುತ್ತಿದ್ದನ್ನು ಕಂಡು ಬಂದಿದ್ದು. ಆ ಟ್ರ್ಯಾಕ್ಟರ್ ಮಾಲೀಕನ ಮಾಲೀಕನಿಗೆ 11,360 ರೂ.ಗಳನ್ನು ದಂಡ ವಿಧಿಸಲಾಗಿದೆ

ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದ್ದು, ಮತ್ತೊಮ್ಮೆ ಈ ರೀತಿ ಮರಳು ಸಾಗಣೆ ನಡೆಸಿದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ತಾಕೀತು ಮಾಡಲಾಗಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ಸಂಜೆವಾಣಿಗೆ ಹೇಳಿದ್ದಾರೆ.

ದಾಳಿ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸಪೇಟೆ ಉಪನಿರ್ದೇಶಕರ ಕಚೇರಿಯ ಭೂವಿಜ್ಞಾನಿ ಪ್ರಕಾಶ್ ಎಸ್, ಕಂದಾಯ ನಿರೀಕ್ಷಕ ಎಸ್.ಗಣೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಗಿರೀಶ್‍ಬಾಬು, ಕೆ.ಜಿಲಾನ್,ವಿಜಯ್ ಕುಮಾರ್, ಮಂಜುನಾಥ, ಲಕ್ಷ್ಮಣ ನಾಯ್ಕ್, ಅತೀಫ್ ಇದ್ದರು.

ಕಂಪ್ಲಿ ಪಟ್ಟಣದ ಒಂದು ಮನೆಯ ಹಿಂಭಾಗದ ಕಾಂಪೌಂಡ್ ನಲ್ಲಿ ಸಹ ಅಕ್ರಮ ಮರಳು ದಾಸ್ತಾನು ಮಾಡಲಾಗಿತ್ತಾದರೂ ಆ ಬಗ್ಗೆ ಪರಿಶೀಲನೆ ಮಾಡಿದ್ದರೂ ಆ‌ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕೇವಲ ಸಣಾಪುರದ ಬಗ್ಗೆ ಮಾಹಿತಿ‌ ನೀಡಿರುವುದು ಅಧಿಕಾರಿಗಳ ಬಗ್ಗೆ ಅನುಮಾನ ಮೂಡಿಸಿದೆ.