ಕಂಪ್ಲಿ: ಗಣೇಶ್ ಗೆ ಭರ್ಜರಿ ಗೆಲುವುಸುರೇಶ್ ಬಾಬುಗೆ ಮತ್ತೆ ಮುಖಭಂಗ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರ ಮತ್ತೆ ಮಾಜಿ ಶಾಸಕ‌ ಸುರೇಶ್ ಬಾಬುಗೆ ಸೋಲಿನ‌ ರುಚಿಯನ್ನು ಉಣಿಸಿದ್ದು. ಸಾಮಾನ್ಯ ಜನರೊಡನೆ ಬೆರೆಯುವ, ರಾತ್ರಿ ವೇಳೆಯಲ್ಲೂ ಜನರ ಕರೆ ಸ್ವೀಕರಿಸಿ ಸ್ಪಂದಿಸುವ ಶಾಸಕ ಜೆ.ಎನ್.ಗಣೇಶ್ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ….ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಸ್ವತಃ ಗಣೇಶ್ ಸಹ ಈ ಮಟ್ಟಿನ ಭರ್ಜರಿ ಗೆಲುವು ದೊರೆಯುತ್ತದೆಂಬ ನಿರೀಕ್ಷೆ ಹೊಂದಿರಲಿಲ್ಲವೇನೋ, ಕಾರಣ ಬಿಜೆಪಿ ಅಭ್ಯರ್ಥಿಯ ಹಣದ ಹಬ್ಬರದಿಂದ ಎನ್ನಬಹದು.

ಜನತೆ ತಮ್ಮ ಸಾಮೂಹಿಕ ಸಮಸ್ಯೆಗೆ ಅಂದರೆ ಕಾಲುವೆಯ ನೀರು ಬಿಡಿಸುವುದು ಸೇರಿದಂತೆ ಬಹುತೇಖ ಸಮಸ್ಯೆಗಳ ಬಗ್ಗೆ ಕರೆದಾಗ ಬರುತ್ತಾನೆ ಎಂಬ ಒಂದೇ ಕಾರಣಕ್ಕೆ, ಜೊತೆಗೆ ಕಾಂಗ್ರೆಸ್ ಗಾಳಿಯಿಂದ ಗಣೇಶ್ ಭರ್ಜರಿ ಲೀಡ್ ನಿಂದ ಆಯ್ಕೆಯಾಗಿದ್ದಾರೆ ಎನ್ನಬಹದು. ಆತನನ್ನು ಸೋಲಿಸಲು ಒಳ ಸಂಚು ಮಾಡಿದವರಿಗೂ ಮುಖ ಭಮಗವಾಗಿದೆನ್ನಬಹದು.

ಸುರೇಶ್ ಬಾಬು ತನ್ನ ಗನ್ ಮ್ಯಾನ್ ಗಳ ಕೋಟೆಯಿಂದ ಹೊರ ಬರದೇ ಇದ್ದುದು, ಹಣದ ಹಮ್ಮು, ಎಷ್ಟೇ ಜನರೊಂದಿಗೆ ಇದ್ದೇನೆಂದು ಕಳೆದ ಒಂದು ವರ್ಷದಿಂದ ಬಿಂಬಿಸಿದರೂ ಜನ‌ ಅದನ್ನು‌ ನಂಬಲಿಲ್ಲ. ಕ್ಷೇತ್ರದ ಮಾಜಿ ಶಾಸಕರೊಬ್ಬರಿಂದ ಒಳ ಒಪ್ಪಂದ, ಬಡ ಜನರ ಅಕ್ಕಿಯ ಕಳ್ಳ ದಂಧೆ ನಡೆಸುತ್ತಿದ್ದಾನೆಂಬ ಆರೋಪದ ರಾಮಸಾಗರದ ನಾರಾಯಣಪ್ಪನ ಬೆಂಬಲ, ಜೆಡಿಎಸ್ ಅಭ್ಯರ್ಥಿ ರಾಜು ನಾಯಕ್ ಮೂಲಕ ಕಾಂಗ್ರೆಸ್ ಮತಗಳ ವಿಭಜನೆಗೆ ಪ್ರಯತ್ನಿಸಿದರೂ ಗೆಲುವಿನ ಸನಿಹ ಬಾರದೆ. ಬಹು ಮತಗಳ ಅಂತರದಿಂದ ಸೋಲು ಕಂಡಿದ್ದು ಮರೆಯಲಾಗದಂತ ನೋವಾಗಿರಬಹುದು. ಅತ್ತ ಪಕ್ಷದಲ್ಲಿನ ಉನ್ನತ ನಾಯಕ ಶ್ರೀರಾಮುಲು ಅವರ ಹೀನಾಯ ಸೋಲು, ಇತ್ತ ಪಕ್ಷವೂ ರಾಜ್ಯದಲ್ಲಿ ಸೋಲು ಕಂಡಿರುವುದು ದೊಡ್ಡ ಪೆಟ್ಟಾಗಿದೆನ್ನಬಹದು.