ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ

????????????????????????????????????

ಸಂಜೆವಾಣಿ ವಾರ್ತೆ
ಬಳ್ಳಾರಿ ನ 21: ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ಗೂ ಹೆಚ್ಚು  ಪ್ರಮಾಣದ ನೀರು ಬಿಡುಗಡೆ ಮಾಡಿದೆ ಇದರಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಮತ್ತು ಕೊಪ್ಪಳ ಜಿಲ್ಲೆಯ  ಗಂಗಾವತಿ ನಡುವೆ  ಸಂಪರ್ಕ ಕಲ್ಪಿಸೋ ತುಂಗಭದ್ರ ಸೇತುವೆ ಮುಳುಗಡೆಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ನಿನ್ನೆ ಸಂಜೆಯಿಂದಲರೆ ಸೇತುವೆ ಮೇಲಿನ ವಾಹನಗಳ ಸಂಚಾರವನ್ನು ಕಡಿತಗೊಳಿಸಕಾಗಿದೆ. ಮತ್ತೊಂದಡೆ ಹಂಪಿಯ ಪುರಂದರ ಮಂಟಪ ಸೇರಿದಂತೆ ಹಲವು ಶಿಲಾ ಮಂಟಪಗಳು, ಸ್ಮಾರಕಗಳು ಜಲಾವೃತಗೊಂಡಿವೆ.
ಇಂದು ಬೆಳಿಗ್ಗೆಯಿಂದ  ಬಳ್ಳಾರಿಯಲ್ಲಿ ಮಳೆ ನಿಂತಿದ್ದು. ಕಳೆದ ಮೂರುದಿನಗಳಿಂದ ಕಾಣದೇ ಇದ್ದ ಸೂರ್ಯ ಕಂಡಿದ್ದಾನೆ. ಇಂದಿಷ್ಟು ಬಿಸಿಲು ಬಂದಿರುವುದು ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

Attachments area