ಕಂಪ್ಲಿ ಕ್ಷೇತ್ರ ರಾಜು ನಾಯಕ್ ಸ್ಪರ್ಧೆ ಯಾರಿಗೆ ಬೊಕ್ಕೆ


ಎನ್.ವೀರಭದ್ರಗೌಡ
ಬಳ್ಳಾರಿ, ಏ.07: ಜಿಲ್ಲೆಯ ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನಿಸಿ. ಸಿಗದ ಕಾರಣ ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ರಾಜನಾಯಕ್ ಸ್ಪರ್ಧೆ ಯಾರ ಗೆಲುವುಗೆ ಬೊಕ್ಕೆ ಬೀಳಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೆರಳಿ‌ಬರುತ್ತಿವೆ.
ಈ ವರಗೆ ಕಾಂಗ್ರೆಸ್  ಅಭ್ಯರ್ಥಿ ಗಣೇಶ್ ಗೆ ಈ ಬಾರಿಯೂ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ತೀವ್ರ ಪೈಪೋಟಿ ನೀಡಲಿದ್ದಾರೆಂಬ ಸನ್ನಿವೇಶ ಇದ್ದರೂ ಗಣೇಶ ಗೆಲ್ಲುತ್ತಾರೆಂಬ ಮಾತುಗಳೇ ಕೇಳಿಸುತ್ತಿದ್ದವು. ಕಾರಣ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಹವಾ ಹೆಚ್ಚಿದೆ ಎಂಬ ಕಾರಣಕ್ಕೆ.
ಆದರೆ ಕಾಂಗ್ರೆಸ್ ಟಿಕೆಟ್ ಸಿಗದೆ, ತಮ್ಮಗೆ ರಾಜಕೀಯ ಮಾರ್ಗದರ್ಶನ ಮಾಡುತ್ತಿರುವ ಮಾಜಿ ಶಾಸಕರ ನಿರ್ದೇಶನದಂತೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಲು ನಿರ್ಧರಿಸಿ  ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿರುವ ರಾಜುನಾಯಕ್ ಗಣೇಶ್ ಗೆಲುವಿಗೆ ಬೊಕ್ಕೆ ಹಾಕುತ್ತಾರೆಂಬ ಮಾತುಗಳು ಕೇಳ ತೊಡಗಿವೆ.
ಕಳೆದ ಬಾರಿ ತಮ್ಮ ಗೆಲುವಿಗೆ ಕಾರಣರಾಗಿದ್ದ ಗುರುವನ್ನು ಮರೆತ ಗಣೇಶನಿಗೆ ರಾಜುನಾಯಕ್ ಮುಳ್ಳಾಗಲಿದ್ದಾರೆ ಎನ್ನಲಾಗುತ್ತಿದೆ
ಎ.10 ರಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರನ್ನು ಕುರುಗೋಡಿಗೆ ಕರೆದು ಬೃಹತ್ ಸಮಾವೇಶ ಮಾಡುತ್ತಿದ್ದಾರೆ ರಾಜು ನಾಯಕ್.
ಪಂಚರತ್ನ ಯೊಜನೆಗಳ ಮೂಲಕ ಕ್ಷೇತ್ರದ ರೈತಾಪಿ ಜನರ ಗಮನ ಸೆಳೆಯುತ್ತಿರುವ ರಾಜು ನಾಯಕ್ ಇಬ್ಬರ ನಡುವೆ ಮೂರನೆಯವರಿಗೆ ಲಾಭ ಎಂಬಂತೆ ಈ ಹಿಂದೆ ಹಗರಿಬೊಮ್ಮನಹಳ್ಳಿಯಲ್ಲಿ ಭೀಮಾನಾಯಕ್ ಗೆದ್ದಂತೆ ಗೆಲಿಯುತ್ತಾರಾ. ಇಲ್ಲ ಗಣೇಶ್ ಗೆಲುವಿಗೆ ಬೊಕ್ಕೆ ಹಾಕುತ್ತಾರೋ ಎಂಬುದನ್ನು ಕಾದು‌ನೋಡಬೇಕಿದೆ.
ಒಂದೊಮ್ಮೆ ಬಳ್ಳಾರಿಯಲ್ಲಿ ಭರತ್ ರೆಡ್ಡಿಗೆ ಕಾಂಗ್ರೆಸ್  ಟಿಕೆಟ್ ಕೊಟ್ಟು. ನೆರೆಯ ಕಂಪ್ಲಿ ಕ್ಷೇತ್ರದ ಗೆಲುವು ನಿಮ್ಮ ಹೆಗಲ ಮೇಲೆ ಎಂದು ಪಕ್ಷ ಹೇಳಿದರೆ. ಆಗ ನಾಯಕ್ ನಿಲುವು ಹೇಗಿರುತ್ತೆ ಎಂಬುದು ಸಹ ಮುಖ್ಯವಾಗಲಿದೆ.
ಇಲ್ಲಿ ತಾನು ಗೆಲ್ಲದಿದ್ದರೂ ಇನ್ನೊಬ್ಬರ ಸೋಲಿಗೆ ರಾಜು ನಾಯಕ್ ಹೇಗೆ ಕಾರಣರಾಗುತ್ತಾರೆ ಎಂಬ ಚರ್ಚೆಯೂ ನಡೆದಿದೆ.