ಕಂಪ್ಲಿ ಕ್ಷೇತ್ರದ 3 ಪ್ರಾಥಮಿಕ ಶಾಲೆಗಳನ್ನು, 4 ಪ್ರೌಢ ಶಾಲೆಗಳನ್ನು ಉನ್ನತೀಕರಿಸಲಾಗಿದೆ


ಸಂಜೆವಾಣಿ ವಾರ್ತೆ
ಕಂಪ್ಲಿ,ಆ.1 ಗ್ರಾಮೀಣ ಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯ ಅನುಕೂಲಕ್ಕಾಗಿ ಕಂಪ್ಲಿ ವಿಧಾನ ಸಭಾ ಕ್ಷೇತ್ರದ 3 ಪ್ರಾಥಮಿಕ ಶಾಲೆಗಳನ್ನು, 4 ಪ್ರೌಢ ಶಾಲೆಗಳನ್ನು  ಉನ್ನತೀಕರಿಸಲಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಅವರು ಭಾನುವಾರ ತಾಲೂಕಿನ ಕಣಿವಿ ತಿಮ್ಮಲಾಪುರ ಗ್ರಾಮದಲ್ಲಿ ನಂ.10 ಮುದ್ದಾಪುರ ಕ್ರಾಸ್‍ನಿಂದ ಕಣಿವಿ ತಿಮ್ಮಲಾಪುರ ವರೆಗಿನ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮೆಟ್ರಿ, ಸೋಮಸಮುದ್ರ, ಕಪ್ಪಗಲ್ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಮತ್ತು ದೇವಸಮುದ್ರ, ಸಿದ್ದಮ್ಮನಹಳ್ಳಿ, ದಮ್ಮೂರು, ಶ್ರೀಧರಗಡ್ಡೆ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳನ್ನು ಪಿಯು ಕಾಲೇಜ್‍ಗಳನ್ನಾಗಿ ಉನ್ನತೀಕರಿಸಲಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75 ವರ್ಷದ ಸಿದ್ದರಾಮೋತ್ಸವಕ್ಕೆ ಕಂಪ್ಲಿ ಕ್ಷೇತ್ರದಿಂದ ಕಾರ್ಯಕರ್ತರು, ಅಭಿಮಾನಿಗಳು, ಎಲ್ಲಾ ವರ್ಗದವರು ಸೇರಿ ಒಟ್ಟು 5 ಸಾವಿರ ಜನ ತೆರಳಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖಂಡರಾದ ರೇಣುಕಪ್ಪ, ಷಣ್ಮುಖಪ್ಪ, ರಾಮಾಲೆಪ್ಪ, ರಾಮಯ್ಯ, ಸಿದ್ದನಗೌಡ, ಎನ್.ಹನುಮಂತಪ್ಪ ಇತರರು ಪಾಲ್ಗೊಂಡಿದ್ದರು.

Attachments area