ಕಂಪ್ಲಿ : ಕ್ರಿಸ್ ಮಸ್ ಆಚರಣೆ

ಕಂಪ್ಲಿ ಡಿ 26 : ಕ್ರಿಸ್ಮಸ್ ಹಬ್ಬದ ನಿಮಿತ್ತ ಇಲ್ಲಿನ ಸಕ್ಕರೆ ಕಾರ್ಖಾನೆಯ ಸಹಾಯಮಾತಾ ದೇಗುಲದಲ್ಲಿ ಶುಕ್ರವಾರ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಗೋದಲಿ ನಿರ್ಮಿಸಿ, ಸಾಂಪ್ರಾದಾಯಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳ ಹಾಗು ಸಾಂಕೇತಿಕವಾಗಿ ಹಬ್ಬ ಆಚರಣೆ ಮಾಡಲಾಯಿತು.
ಚರ್ಚ್ ನ ಫಾದರ್ ವೈ ಆನಂದ್ ಮಾತನಾಡಿ, ಭೂಮಂಡಲದ ಮನುಕುಲದ ರಕ್ಷಣೆಗಾಗಿ ಏಸುಪ್ರಭು ಮನುಷ್ಯಸ್ವಭಾವ ಧರಿಸಿದ ಪವಿತ್ರ ಹಬ್ಬ ಕ್ರಿಸ್ಮಸ್ ಆಗಿದೆ. ಕ್ರಿಸ್ಮಸ್ ನಮ್ಮ ಪಾಲಿಗೆ ಸಾಮಾಬ್ಯ ಹಬ್ಬವಾಗಿಲ್ಲ. ಬದಲಿಗೆ ಶಾಂತಿ-ಪ್ರೀತಿ-ಕ್ಷಮಿಸುವ ಹಬ್ಬವೆಂದೇ ಪ್ರಖ್ಯಾತಿ ಪಡೆದಿದೆ. ಮನುಷ್ಯರೊಳಗಿನ ಅಹಂಕಾರ, ದ್ವೇಷ, ಅಸೂಯೆಯಂತಹ ಗುಣಗಳನ್ನು ದೂರವಿಟ್ಟು ಮಾನವಿಯತೆಯನ್ನು ಸಾರುವ ಹಬ್ಬವೇ ಕ್ರಿಸ್ಮಸ್ ಆಗಿದೆ ಎಂದು ಚರ್ಚ್ ಗೆ ಆಗಮಿಸಿದ್ದ ದೈವಭಕ್ತಾದಿಗಳಿಗೆ ಬೋಧಿಸಿದರು‌.
ಈ ಸಂದರ್ಭದಲ್ಲಿ ಸಿಸ್ಟರ್ಸ್, ದೈವಭಕ್ತಾದಿಗಳು ಸೇರಿದಂತೆ ಅನೇಕರು ಪಾಲ್ಗೊಂಡು ಸರಳವಾಗಿ ಹಬ್ಬ ಆಚರಿಸಿ ಸಂತಸಪಟ್ಟರು. ಚರ್ಚ್ನಲ್ಲಿ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಗೋದಲಿ ನಿರ್ಮಿಸಿದ್ದು ನೋಡುಗರ ಗಮನ ಸೆಳೆಯಿತು. ಚಿಕ್ಕ ಮಕ್ಕಳಂತು ಗೋದಲಿ ನೋಡಿ ಹರ್ಷ ವ್ಯಕ್ತಪಡಿಸಿದರು‌.