ಕಂಪ್ಲಿಯ ಶ್ರೀನಿಧಿ ಪತ್ತಿನ ಸಹಕಾರ ಸಂಘದ ಮಹಾಜನ ಸಭೆ

ಕಂಪ್ಲಿ, ನ.9: ಕಂಪ್ಲಿಯ ಶ್ರೀನಿಧಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಭಾನುವಾರದಂದು 2019-20ನೇ ಸಾಲಿನ ಮಹಾಜನ ಸಭೆ ಜರುಗಿತು.
ಪುರಸಭೆ ಅಧ್ಯಕ್ಷ ಶಾಂತಲಾ ವಿ.ವಿದ್ಯಾಧರ ಮಹಾಜನ ಸಭೆಗೆ ಚಾಲನೆ ನೀಡಿದರು. ಶ್ರೀನಿಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ತಿರುಪತಿರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಶ್ರೀನಿಧಿ ಪತ್ತಿನ ಸಹಕಾರ ಸಂಘವು 2020ನೇ ಮಾರ್ಚ್ 31ಕ್ಕೆ ಒಟ್ಟು 5.41ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದೆ. ಸಂಘದ 735ಸದಸ್ಯರಿಂದ 17,86,750ರೂ.ಗಳ ಷೇರು ಬಂಡವಾಳ ಸಂಗ್ರಹಿಸಿದೆ. 1,08,50,178 ರೂ.ಗಳ ಠೇವಣಿ ಯನ್ನು ಸಂಗ್ರಹಿಸಿದೆ. 1,38,86,208ರು.ಗಳ ದುಡಿಯುವ ಬಂಡವಾಳ ಹೊಂದಿದೆ. 1,26,66,000 ರೂ.ಗಳ ನಾನಾ ಸಾಲ ವಿತರಿಸಿದ್ದು, ಶೇ.70ಸಾಲ ವಸೂಲಾತಿಯಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ವ್ಯವಸ್ಥಾಪಕ ಬಿ.ವೀರೇಂದ್ರಗೌಡ್ರು ಲೆಕ್ಕಪರಿಶೋಧನಾ ವರದಿ, ಅಡಾವೆ ಪತ್ರಿಕೆ, ಲೆಕ್ಕಪತ್ರ ಮಂಡಿಸಿದರು.
ಮಹಾಜನ ಸಭೆಯಲ್ಲಿ ಪುರಸಭೆ ಸದಸ್ಯ ಎನ್.ರಾಮಾಂಜನೇಯಲು, ಸಂಘದ ಉಪಾಧ್ಯಕ್ಷ ಜಿ.ಸುಧಾಕರ, ನಿರ್ದೇಶಕರಾದ ಪಿ.ಬ್ರಹ್ಮಯ್ಯ, ಎಸ್.ಸಣ್ಣ ಹುಲುಗಪ್ಪ, ಗರಡಿ ವಿರುಪಾಕ್ಷಪ್ಪ, ಜಿ.ನಾಗೇಶ್ವರರಾವ್, ಎನ್.ಪುರುಷೋತ್ತಮ, ಜಿ.ಕೊಂಡಮ್ಮ, ಜಿ.ಕಮಲಮ್ಮ, ಎನ್.ಮಹೇಶ್, ಪಿ.ಅಂಜನಾಕುಮಾರಿ, ಎಂ.ಮಹೇಶ್, ಸಿಬ್ಬಂದಿ ಸಾಯಿಶ್ರೀ, ಸುನಿಲ್‍ಕುಮಾರ್, ರಾಕೇಶ್, ವಿ.ವಿರುಪಣ್ಣ, ಆನಂದ್, ಸಂಘದ ಸದಸ್ಯರು ಸೇರಿ ಇತರರಿದ್ದರು.