ಕಂಪ್ಲಿಯಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ

ಕಂಪ್ಲಿ ಏ 25 : ಪಟ್ಟಣದ ತಹಸಿಲ್‌ ಕಚೇರಿ ಆವರಣದಲ್ಲಿ ಭಾನುವಾರದಂದು ತಹಸೀಲ್ದಾರ್ ಅಧ್ಯಕ್ಷತೆ ಹಾಗು ಜೈನ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ತೇದಾರ ಎಸ್ ರೇಖಾ, ಗ್ರಾಮ ಲೆಕ್ಕಾಧಿಕಾರಿಗಳಾದ ವಿರೂಪಾಕ್ಷಿಗೌಡ, ಶರೀಫ್, ಕಚೇರಿ ಸಿಬ್ಬಂದಿ, ಜೈನ ಸಮುದಾಯದ ಸ್ಥಳೀಯ ಮುಖಂಡರಾದ ಶಾಂತಿಲಾಲ್ ಬಾಲಾರ್, ಜವೇರಲಾಲ್ ಬಾಗ್ರೇಚಾ,ಗೌತಮ್ ರಾಂಕಾ, ಹೀರಾಲಾಲ್ ಸೇರಿದಂತೆ ಅನೇಕರಿದ್ದರು.
ಪುರಸಭೆ ಕಚೇರಿಯಲ್ಲು ಸರಳ ಆಚರಣೆ:-
ಇಲ್ಲಿನ ಪುರಸಭೆ ಕಚೇರಿ ಆವರಣದಲ್ಲಿ ಭಾನುವಾರ ಪುರಸಭೆ ಅಧ್ಯಕ್ಷೆ ಶಾಂತಲಾ ವಿ ವಿದ್ಯಾಧರ ಅಧ್ಯಕ್ಷತೆಯಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ್, ಜೆಇ ವೆಂಕೋಬ, ಆರ್ ಐ ವೆಂಕೋಬಪ್ಪ, ಆರ್ ಒ ನಾಗಭೂಷಣ, ಪುರಸಭೆ ಸಿಬ್ಬಂದಿಗಳಾದ ಜ್ಯೋತಿ,ಮೀನಾಕ್ಷಿ, ಸುಧಾಕರ್ ಸೇರಿದಂತೆ ಅನೇಕರಿದ್ದರು.